ಪದವಿ ಪರೀಕ್ಷೆ ಮುಂದೂಡಿರುವುದು ಸರಿಯಲ್ಲ: ರಘುಪತಿ ಭಟ್
ಉಡುಪಿ, ಆ.4: ಕೇರಳದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪದವಿ ಪರೀಕ್ಷೆಯನ್ನು ಮುಂದೂ ಡಿರುವುದು ಸರಿಯಾದ ಕ್ರಮವಲ್ಲ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಕೇರಳದ ವಿದ್ಯಾರ್ಥಿಗಳಿಗೋಸ್ಕರ ಪದವಿ ಪರೀಕ್ಷೆ ಮುಂದೂಡಿರುವುದರಿಂದ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಆದುದರಿಂದ ಪದವಿ ಪರೀಕ್ಷೆ ನಡೆಸಬೇಕೆಂದು ಅವರು ಟ್ವೀಟ್ ಮಾಡಿ ಆಗ್ರಹಿಸಿದ್ದಾರೆ.
ನಮ್ಮ ಭಾಗದ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ಪರೀಕ್ಷೆ ನಡೆಸದೆ ಇದ್ದರೆ ಅವರ ಮುಂದಿನ ಉನ್ನತ ವ್ಯಾಸಂಗಕ್ಕೆ ತೊಂದರೆಯಾಗು ತ್ತದೆ. ಈಗ ಪರೀಕ್ಷೆ ಮುಂದೂಡದೆ ಪರೀಕ್ಷೆ ನಡೆಸಬೇಕು. ಕೇರಳದ ವಿದ್ಯಾರ್ಥಿಗಳಿಗೆ ನಂತರ ಪ್ರತ್ಯೇಕ ಪರೀಕ್ಷೆ ನಡೆಸಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Next Story





