ಉಡುಪಿ, ಆ.4: ಆಗಸ್ಟ್ 5ರಿಂದ 11ರವರೆಗೆ ಉಡುಪಿಯ ಡಯಟ್ ಪರೀಕ್ಷಾ ಕೇಂದ್ರದಲ್ಲ್ಲಿ ನಡೆಯುವ ಪ್ರಥಮ ಡಿ.ಎಲ್.ಇ.ಡಿ ಮತ್ತು ದ್ವಿತೀಯ ಡಿ.ಎಲ್.ಇ.ಡಿ ಮುಖ್ಯ ಪರೀಕ್ಷೆಗೆ ಸಂಬಂಧಿಸಿದಂತೆ, ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.