ಮೊದಲ ಟೆಸ್ಟ್: ಬುಮ್ರಾ,ಶಮಿ ದಾಳಿಗೆ ತತ್ತರಿಸಿದ ಆಂಗ್ಲರು 183 ರನ್ ಗೆ ಆಲೌಟ್

photo: twitter
ನಾಟಿಂಗ್ ಹ್ಯಾಮ್: ನಾಯಕ ಜೋ ರೂಟ್ ಅರ್ಧಶತಕದ(64, 108 ಎಸೆತ, 4 ಬೌಂಡರಿ)ಹೊರತಾಗಿಯೂ ಭಾರತದ ವೇಗದ ಬೌಲರ್ ಗಳಾಗಿರುವ ಜಸ್ ಪ್ರೀತ್ ಬುಮ್ರಾ(4-46) ಹಾಗೂ ಮುಹಮ್ಮದ್ ಶಮಿ(3-28) ನಿಖರ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 65.4 ಓವರ್ ಗಳಲ್ಲಿ ಕೇವಲ 183 ರನ್ ಗೆ ಆಲೌಟಾಗಿದೆ.
ಬುಧವಾರ ಇಲ್ಲಿ ಆರಂಭವಾದ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟಾಸ್ ಜಯಿಸಿದ ರೂಟ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಸಿಬ್ಲೆಯೊಂದಿಗೆ ಇನಿಂಗ್ಸ್ ಆರಂಭಿಸಿದ ರೊರಿ ಬರ್ನ್ಸ್ ಕೇವಲ 5 ಎಸೆತ ಎದುರಿಸಿ ಶೂನ್ಯಕ್ಕೆ ಔಟಾದರು. ರೂಟ್ ಹೊರತುಪಡಿಸಿದರೆ ಜಾನಿ ಬೈರ್ ಸ್ಟೋವ್(29), ಝಾಕ್ ಕ್ರಾವ್ಲೆ 27 ಹಾಗೂ ಸ್ಯಾಮ್ ಕರನ್(27) ಎರಡಂಕೆಯ ಸ್ಕೋರ್ ಗಳಿಸಿದರು. ಬರ್ನ್ಸ್ ಸಹಿತ ನಾಲ್ವರು ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿರುವುದು ಇಂಗ್ಲೆಂಡ್ ಬ್ಯಾಟಿಂಗ್ ವೈಫಲ್ಯಕ್ಕೆ ಸಾಕ್ಷಿಯಾಗಿತ್ತು.
ವೇಗದ ಬೌಲರ್ ಗಳಾದ ಶಮಿ ಹಾಗೂ ಬುಮ್ರಾಗೆ ಸಾಥ್ ನೀಡಿದ ಯುವ ಬೌಲರ್ ಶಾರ್ದೂಲ್ ಠಾಕೂರ್ 41 ರನ್ ಗೆ 2 ವಿಕೆಟ್ ಪಡೆದರು.
Next Story