ನರಹಳ್ಳಿ ಪ್ರತಿಷ್ಠಾನ ಪ್ರಶಸ್ತಿಗೆ ಸಂಶೋಧಕ ಜಿ.ಎನ್.ಉಪಾಧ್ಯ ಆಯ್ಕೆ
ಬೆಂಗಳೂರು, ಆ.4: ನರಹಳ್ಳಿ ಪ್ರತಿಷ್ಠಾನ ಕೊಡಮಾಡುವ 2021ನೇ ಸಾಲಿನ ನರಹಳ್ಳಿ ಪ್ರಶಸ್ತಿಗೆ ವಿಮರ್ಶಕ ಹಾಗೂ ಸಂಶೋಧಕ ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ.
ಹಿರಿಯ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಧ್ಯಕ್ಷತೆಯಲ್ಲಿ ಕಳೆದ ಆರು ವರ್ಷಗಳಿಂದ ನರಹಳ್ಳಿ ಪ್ರಶಸ್ತಿ ನೀಡುತ್ತಾ ಬಂದಿದ್ದು, 2021ನೇ ಸಾಲಿನಲ್ಲಿ ಉಡುಪಿ ಮೂಲದ ಖ್ಯಾತ ವಿಮರ್ಶಕ, ಸಂಶೋಧಕ ಜಿ.ಎನ್.ಉಪಾಧ್ಯ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಹದಿನೈದು ಸಾವಿರ ರೂ. ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ.
ಹಿರಿಯ ಸಾಹಿತಿಗಳಾದ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್.ಲಕ್ಷ್ಮಣರಾವ್, ಲಕ್ಷ್ಮಣ ಕೊಡಸೆ, ರಜನಿ ನರಹಳ್ಳಿ, ಆನಂದರಾಮ ಉಪಾಧ್ಯ, ನ.ರವಿಕುಮಾರ್, ಸಿ.ಕೆ.ರಾಮೇಗೌಡ ಅವರನ್ನೊಳಗೊಂಡ ಸಮಿತಿಯು ಈ ಪ್ರಶಸ್ತಿಗೆ ಜಿ.ಎನ್.ಉಪಾಧ್ಯ ಅವರನ್ನು ಆಯ್ಕೆ ಮಾಡಿರುವುದಾಗಿ ನರಹಳ್ಳಿ ಪ್ರತಿಷ್ಠಾನ ಪ್ರಕಟಣೆಯಲ್ಲಿ ತಿಳಿಸಿದೆ.
Next Story





