ಒಲಿಂಪಿಕ್ಸ್: ಕಂಚಿನ ಪದಕದ ಪಂದ್ಯದಲ್ಲಿ ಕುಸ್ತಿಪಟು ದೀಪಕ್ ಪುನಿಯಾಗೆ ಸೋಲು

photo: twitter
ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಗುರುವಾರ ನಡೆದ ಕುಸ್ತಿ ಸ್ಪರ್ಧೆಯ ಪುರುಷರ ಫ್ರೀಸ್ಟೈಲ್ 86 ಕೆಜಿ ವಿಭಾಗದ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಭಾರತದ ದೀಪಕ್ ಪುನಿಯಾ ಅವರು ಸ್ಯಾನ್ ಮರಿನೋದ ಮೈಲ್ಸ್ ಅಮೈನ್ ವಿರುದ್ಧ 2-4 ಅಂತರದಿಂದ ಸೋತಿದ್ದಾರೆ. ಈ ಸೋಲಿನೊಂದಿಗೆ ಕಂಚು ಗೆಲ್ಲುವ ಅವಕಾಶವನ್ನು ಕಳೆದುಕೊಂಡರು.
ಮೊದಲ ಸುತ್ತಿನ ಅಂತ್ಯದಲ್ಲಿ 2-1 ಮುನ್ನಡೆಯಲ್ಲಿದ್ದ ದೀಪಕ್ ಪದಕದ ಭರವಸೆ ಮೂಡಿಸಿದ್ದರು.
Next Story