ಬೋಟಿನಲ್ಲಿದ್ದ ಡೀಸೆಲ್ ಕಳವು : ದೂರು
ಕುಂದಾಪುರ, ಆ.5: ಕುಂದಾಪುರ ಕಸಬಾ ಗ್ರಾಮದ ಕೋಡಿ ಧಕ್ಕೆಯಲ್ಲಿ ಲಂಗರು ಹಾಕಿದ್ದ ರಾಘವೇಂದ್ರ ಎಂಬವರಿಗೆ ಸೇರಿದ ಶ್ರೀಗುರು ಸನ್ನಿಧಿ ಹೆಸರಿನ ಮೀನುಗಾರಿಕಾ ಬೋಟ್‌ನಲ್ಲಿದ್ದ ಸುಮಾರು 28,500 ರೂ. ಮೌಲ್ಯದ 300 ಲೀಟರ್ ಡೀಸೆಲ್‌ನ್ನು ಎಪ್ರಿಲ್ 27ರಿಂದ ಜು.13ರ ನಡುವಿನ ಅವಧಿಯಲ್ಲಿ ಯಾರೋ ಕಳವು ಮಾಡಿಕೊಂಡು ಹೋಗಿರುವುದಾಗಿ ಕುಂದಾಪುರ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತಿದ್ದಾರೆ.
Next Story





