ಜುಗಾರಿ: ಎಂಟು ಮಂದಿ ಆರೋಪಿಗಳು ಸೆರೆ
ಮಂಗಳೂರು, ಆ.5: ನಗರದ ಬಿಜೈ ಬಾರ್‌ವೊಂದರ ಎದುರು ವಾಹನ ಪಾರ್ಕಿಂಗ್ ಸ್ಥಳದಲ್ಲಿ ಹಣ ಪಣವಾಗಿಟ್ಟು ಜುಗಾರಿ ಆಡುತ್ತಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ಆಟಕ್ಕೆ ಉಪಯೋಗಿಸಿರುವ 24,410 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





