2020ರಲ್ಲಿ 3.66 ಲಕ್ಷ ಅಪಘಾತ, 1.32 ಲಕ್ಷ ಸಾವು: ಕೇಂದ್ರ ಸರಕಾರ ಮಾಹಿತಿ

ಹೊಸದಿಲ್ಲಿ, ಆ. 5: ಭಾರತದಲ್ಲಿ 2020ರಲ್ಲಿ 3,66,138 ರಸ್ತೆ ಅಪಘಾತಗಳು ಸಂಭವಿಸಿದ್ದು, 1,31,714 ಮಂದಿ ಸಾವನ್ನಪ್ಪಿದ್ದಾರೆ ಎಂದು ಗುರುವಾರ ಲೋಕಸಭೆಯಲ್ಲಿ ತಿಳಿಸಲಾಯಿತು. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು, ತನ್ನ ಸಚಿವಾಲಯ ಶಿಕ್ಷಣ, ಎಂಜಿನಿಯರಿಂಗ್ (ರಸ್ತೆ ಹಾಗೂ ವಾಹನಗಳು), ಜಾರಿ ಹಾಗೂ ತುರ್ತು ಆರೈಕೆ ಆಧಾರಿತ ರಸ್ತೆ ಸುರಕ್ಷಾ ಸಮಸ್ಯೆಗಳನ್ನು ಪರಿಹರಿಸುವ ಬಹುಮುಖಿ ಕಾರ್ಯತಂತ್ರವನ್ನು ರೂಪಿಸಿದೆ ಎಂದರು.
ರಸ್ತೆ ಬಳಕೆದಾರರಲ್ಲಿ ಜಾಗೃತಿ ಮೂಡಿಸುವಂತೆ ದೇಶದ ಪ್ರತಿ ಜಿಲ್ಲೆಯಲ್ಲಿರುವ ಸಂಸತ್ ಸದಸ್ಯರ ರಸ್ತೆ ಸುರಕ್ಷಾ ಸಮಿತಿಗೆ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಸೂಚನೆ ನೀಡಿದೆ ಎಂದು ಅವರು ತಿಳಿಸಿದರು. ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಗಡ್ಕರಿ ಅವರು, ಪ್ರಸಕ್ತ ವಿತ್ತ ವರ್ಷದ 3 ತಿಂಗಳಲ್ಲಿ ದೇಶದಲ್ಲಿ 2,284 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
Next Story





