ಆಹಾರ ಭದ್ರತೆ ಕಾಪಾಡಬೇಕಾದರೆ, ಕೃಷಿ ಕಾಯ್ದೆ ರದ್ದುಗೊಳಿಸಬೇಕು: ಪ್ರಿಯಾಂಕಾ ಗಾಂಧಿ

ಹೊಸದಿಲ್ಲಿ, ಆ. 5: ದೇಶದ ಆಹಾರ ಭದ್ರತೆ ಕಾಪಾಡಬೇಕಾದರೆ, ಕಳೆದ ವರ್ಷ ರೂಪಿಸಲಾದ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವ ಮೂಲಕ ರೈತರ ಗೌರವವನ್ನು ಮರು ಸ್ಥಾಪಿಸಬೇಕು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ರೈತರು ಬೆಳೆ ಬೆಳೆಸಿದ್ದಾರೆ ಹಾಗೂ ಆಹಾರದ ಕೊರತೆ ಆಗದಂತೆ ನೋಡಿಕೊಂಡಿದ್ದಾರೆ. ಆದರೆ, ಪ್ರಧಾನಿ ಅವರು ರೈತರಿಗೆ ಕೃತಜ್ಞತೆ ಮಾತ್ರ ಹೇಳಿದ್ದಾರೆ ಎಂದು ಅವರು ತಿಳಿಸಿದರು. ಉತ್ತರಪ್ರದೇಶದಲ್ಲಿ ಆಹಾರ ಭದ್ರತೆಯ ಯೋಜನೆಯ ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಂವಹನ ಕಾರ್ಯಕ್ರಮದ ಬಳಿಕ ಪ್ರಿಯಾಂಕಾ ಗಾಂಧಿ ವಾದ್ರಾ ಈ ಹೇಳಿಕೆ ನೀಡಿದ್ದಾರೆ.
‘‘ಮೋದಿಜಿ ಅವರು ದೇಶದ ಆಹಾರ ಭದ್ರತೆಗೆ ಬೆದರಿಕೆ ಒಡ್ಡುವ ಕರಾಳ ಕಾಯ್ದೆಯನ್ನು ರೂಪಿಸಿದರು. ದೇಶದ ಆಹಾರ ಭದ್ರತೆಯನ್ನು ರಕ್ಷಿಸಬೇಕಾದರೆ, ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಮೂಲಕ ರೈತರಿಗೆ ಗೌರವ ನೀಡಬೇಕು’’ ಎಂದು ಅವರು ಹೇಳಿದರು.
Next Story





