ಒಲಿಂಪಿಕ್ಸ್: ಕುಸ್ತಿಪಟು ಬಜರಂಗ್ ಸೆಮಿ ಫೈನಲ್ ಗೆ ಪ್ರವೇಶ

ಟೋಕಿಯೊ: ಭಾರತದ ಸ್ಟಾರ್ ಕುಸ್ತಿಪಟು ಬಜರಂಗ್ ಪುನಿಯಾ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪುರುಷರ ಫ್ರೀಸ್ಟೈಲ್ 65 ಕೆಜಿ ತೂಕ ವಿಭಾಗದಲ್ಲಿ ಸೆಮಿ ಫೈನಲ್ ಗೆ ಅರ್ಹತೆ ಪಡೆದರು.
ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಬಜರಂಗ್ ಅವರು ಇರಾನ್ ನ ಮೊರ್ತೆಝಾ ಘಿಯಾಸಿ ಅವರನ್ನು 2-1 ಅಂತರದಿಂದ ಸೋಲಿಸಿ ಈ ಸಾಧನೆ ಮಾಡಿದರು.
ಬಜರಂಗ್ ಅವರು ಶುಕ್ರವಾರ ಮಧ್ಯಾಹ್ನ 2:55ಕ್ಕೆ ನಡೆಯಲಿರುವ ಸೆಮಿ ಫೈನಲ್ ನಲ್ಲಿ ಅಝರ್ ಬೈಜಾನ್ ನ ಹಾಜಿ ಅಲಿಯೇವ್ ಅವರನ್ನು ಎದುರಿಸಲಿದ್ದಾರೆ.
ಮತ್ತೊಂದೆಡೆ, ಮಹಿಳಾ 50 ಕೆಜಿ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕುಸ್ತಿಪಟು ಸೀಮಾ ಬಿಸ್ಲಾ 1-3 ರಿಂದ ಟುನೀಶಿಯಾದ ಸರ್ರಾ ಹಮ್ದಿ ವಿರುದ್ಧ ಸೋತರು.
Next Story