ಅನಿಲಕಟ್ಟೆ: ಸ್ವಲಾತ್ ಮಜ್ಲಿಸ್, ಮದ್ರಸ ಪ್ರಾರಂಭೋತ್ಸವ

ವಿಟ್ಲ, ಆ.6: ಅನಿಲಕಟ್ಟೆ ಸಿ.ಎಂ.ಮಡವೂರ್ ಹಯಾತುಲ್ ಇಸ್ಲಾಂ ಮದ್ರಸ ಪ್ರಾರಂಭೋತ್ಸವ ಹಾಗೂ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮವು ಸೈಯದ್ ಹುಸೈನ್ ಬಾಅಲವಿ ತಂಙಳ್ ಕುಕ್ಕಾಜೆ ಅಧ್ಯಕ್ಷತೆಯಲ್ಲಿ ನಡೆಯಿತು.
ಕೊಡಂಗಾಯಿ ಜುಮಾ ಮಸೀದಿಯ ಖತೀಬ್ ಸಿದ್ದೀಕ್ ಅರ್ಷದಿ, ಪೆರುವಾಯಿ ಮಸೀದಿಯ ಖತೀಬ್ ಗಫೂರ್ ಹನೀಫಿ, ಅಬ್ದುಲ್ ರಝಾಕ್ ಮುಸ್ಲಿಯಾರ್ ಪಳಿಕೆ, ಶರೀಫ್ ಮೂಸಾ ಕುದ್ದುಪದವು, ಅಬೂಬಕರ್ ಅನಿಲಕಟ್ಟೆ, ಜಮಾಲುದ್ದೀನ್ ಒಕ್ಕೆತ್ತೂರು, ಅಬೂಬಕರ್ ಕಡಂಬು, ಅಬೂಬಕರ್ ಮಂಗಿಲಪದವು, ಅಬ್ಬಾಸ್, ಉಮರ್, ಸಿದ್ದೀಕ್ ಅನಿಲಕಟ್ಟೆ ಮುಂತಾದವರು ಉಪಸ್ಥಿತರಿದ್ದರು.
ಇದೇವೇಳೆ ಮದ್ರಸ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಮುಅಲ್ಲಿಂ ಹನೀಫ್ ಲತೀಫಿ ಪ್ರಸ್ತಾವನೆಗೈದರು. ಸಿ.ಎಚ್.ಇಬ್ರಾಹೀಂ ಮುಸ್ಲಿಯಾರ್ ಸ್ವಾಗತಿಸಿದರು. ಪಿ.ಎ.ಮಹಮ್ಮದ್ ಮುಸ್ಲಿಯಾರ್ ವಂದಿಸಿದರು.
Next Story









