ಮುಡಿಪು: ಜ್ಯುವೆಲ್ಲರಿ ಮಳಿಗೆಯ ಗೋಡೆ ಕೊರೆದು ಕಳವಿಗೆ ವಿಫಲ ಯತ್ನ
ಸೈರನ್ ಮೊಳಗಿದಾಗ ಪರಾರಿಯಾದ ಕಳ್ಳರು

ಕೊಣಾಜೆ, ಆ.6: ಮುಡಿಪು ಜಂಕ್ಷನ್ ನಲ್ಲಿರುವ ಜ್ಯುವೆಲ್ಲರ್ ಮಳಿಗೆಯೊಂದಕ್ಕೆ ಕನ್ನ ಹಾಕಿ ಕಳ್ಳತನಕ್ಕೆ ವಿಫಲ ಯತ್ನ ನಡೆಸಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಈ ಸಂದರ್ಭದಲ್ಲಿ ಸೈರನ್ ಮೊಳಗಿದ್ದರಿಂದ ಕಳ್ಳರು ಕೈಗೆ ಸಿಕ್ಕ ಬೆಳ್ಳಿಯ ಆಭರಣವೊಂದನ್ನು ಕದ್ದು ಪರಾರಿಯಾದ ಘಟನೆ ಗುರುವಾರ ತಡರಾತ್ರಿ ಸಂಭವಿಸಿದೆ.
ಮುಡಿಪು ಜಂಕ್ಷನ್ ನಲ್ಲಿರುವ ಇಬ್ರಾಹೀಂ, ಹನೀಫ್ ಎಂಬವರ ಮಾಲಕತ್ವದ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಮಳಿಗೆಯಲ್ಲಿ ಈ ಘಟನೆ ಸಂಭವಿಸಿದೆ. ಕಳ್ಳರು ಶಾಪ್ ಗೋಡೆ ಕೊರೆದು ಒಳಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ಸೈರನ್ ಮೊಳಗಿದೆ. ಹಾಗೂ ಸೆನ್ಸಾರ್ ಮೂಲಕ ಇಬ್ರಾಹೀಂ ಅವರ ಮೊಬೈಲ್ ಫೋನ್ ಗೂ ಮೆಸೇಜ್ ಹೋಗಿತ್ತು. ಸೈರನ್ ಸದ್ದು ಕೇಳುತ್ತಳೆ ಕಳ್ಳರು ಜಾಗರೂಕರಾಗಿ ಅಲ್ಲಿಯೇ ಕೈಗೆ ಸಿಕ್ಕ ಸುಮಾರು 10 ಸಾವಿರ ರೂ. ಮೌಲ್ಯದ ಬೆಳ್ಳಿಯ ಸರವೊಂದನ್ನು ಎಗರಿಸಿ ಪರಾರಿಯಾಗಿದ್ದಾರೆ.
ಪೊಲೀಸ್ ಅಧಿಕಾರಿಗಳು, ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.











