ಅಫ್ಘಾನ್ ಸರಕಾರದ ಮಾಧ್ಯಮ ಮಾಹಿತಿ ಕೇಂದ್ರದ ಮುಖ್ಯಸ್ಥನನ್ನು ಹತ್ಯೆಗೈದ ತಾಲಿಬಾನ್

photo: twitter
ಕಾಬೂಲ್ (ಅಫ್ಘಾನಿಸ್ತಾನ), ಆ. 6: ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಲ್ಲಿ ಸರಕಾರದ ಉನ್ನತ ಮಾಧ್ಯಮ ಮತ್ತು ಮಾಹಿತಿ ಅಧಿಕಾರಿಯನ್ನು ಶುಕ್ರವಾರ ಹತ್ಯೆಗೈದಿದ್ದಾರೆ.
ಹೆಚ್ಚುತ್ತಿರುವ ವಾಯು ದಾಳಿಗಳಿಗೆ ಪ್ರತೀಕಾರವಾಗಿ ಸರಕಾರದ ಹಿರಿಯ ಅಧಿಕಾರಿಗಳನ್ನು ಕೊಲ್ಲುವುದಾಗಿ ತಾಲಿಬಾನ್ ಉಗ್ರರು ಎಚ್ಚರಿಸಿದ ಬಳಿಕ ಈ ಹತ್ಯೆ ನಡೆದಿದೆ. ಸರಕಾರಿ ಮಾಧ್ಯಮ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ದಾವ ಖಾನ್ ಮಿನಪಾಲ್ ರನ್ನು ಹತ್ಯೆಗೈಯಲಾಗಿದೆ ಎಂದು ಕೇಂದ್ರ ಸರಕಾರದ ಆಂತರಿಕ ಸಚಿವಾಲಯ ತಿಳಿಸಿದೆ.
‘‘ದುರದೃಷ್ಟವಶಾತ್ ಅನಾಗರಿಕ ಭಯೋತ್ಪಾದಕರು ಮತ್ತೊಮ್ಮೆ ತಮ್ಮ ಹೇಡಿತನದ ಕೃತ್ಯವನ್ನು ಪುನರಾವರ್ತಿಸಿದ್ದಾರೆ ಹಾಗೂ ದೇಶಭಕ್ತ ಅಫ್ಘಾನ್ ಪ್ರಜೆಯೊಬ್ಬರು ಹುತಾತ್ಮರಾಗಿದ್ದಾರೆ’’ ಎಂದು ಆಂತರಿಕ ಸಚಿವಾಲಯದ ವಕ್ತಾರ ಮಿರ್ವಾಯಿಸ್ ಸ್ತಾನಿಕ್ಝಾಯ್ ಹೇಳಿದ್ದಾರೆ.
Next Story





