ಏಶ್ಯನ್ ದಾಖಲೆ ಮುರಿದರೂ ಒಲಿಂಪಿಕ್ಸ್ ಫೈನಲ್ ತಲುಪಲು ಭಾರತದ 4x400 ಮೀ. ರಿಲೇ ತಂಡ ವಿಫಲ

photo: IOA
ಟೋಕಿಯೊ, ಆ.6: ಒಲಿಂಪಿಕ್ಸ್ ನಲ್ಲಿ ಶುಕ್ರವಾರ ಭಾರತೀಯ ಪುರುಷರ ತಂಡವು 4x400 ಮೀ. ರಿಲೇ ಯಲ್ಲಿ ಏಶ್ಯ ದಾಖಲೆಯನ್ನು ಮುರಿದರೂ ಫೈನಲ್ ನಲ್ಲಿ ಸ್ಥಾನ ಗಿಟ್ಟಿಸುವಲ್ಲಿ ಸ್ವಲ್ಪದರಲ್ಲೇ ವಿಫಲವಾಯಿತು.
ಭಾರತದ ಓಟಗಾರರಾದ ಮುಹಮ್ಮದ್ ಅನಸ್, ಟಾಮ್ ನಿರ್ಮಲ್, ರಾಜೀವ್ ಅರೋಕಿಯ ಹಾಗೂ ಅಮೋಜ್ ಜೇಕಬ್ ಎರಡನೇ ಹೀಟ್ ನಲ್ಲಿ 3:00.25 ಸೆಕೆಂಡ್ ನಲ್ಲಿ ಓಟವನ್ನು ಮುಗಿಸಿ ನಾಲ್ಕನೇ ಸ್ಥಾನ ಪಡೆದರು.
ಒಟ್ಟಾರೆ 9ನೇ ಸ್ಥಾನ ಪಡೆದ ಭಾರತದ ಓಟಗಾರರು 8 ತಂಡಗಳಿರುವ ಫೈನಲ್ ನಲ್ಲಿ ಸ್ಥಾನ ಪಡೆಯಲು ವಿಫಲರಾದರು. ಪ್ರತಿ ಹೀಟ್ ಗಳ ಮೊದಲ ಮೂವರು ಓಟಗಾರರು ಹಾಗೂ ವೇಗವಾಗಿ ಓಡುವ ಇನ್ನಿಬ್ಬರು ಫೈನಲ್ ಗೆ ತೇರ್ಗಡೆಯಾಗುತ್ತಾರೆ.
ಈ ಹಿಂದೆ ಏಶ್ಯದ ದಾಖಲೆ ಖತರ್ ಹೆಸರಲ್ಲಿತ್ತು. ಖತರ್ ಅತ್ಲೆಟಿಕ್ಸ್ ತಂಡವು 2018ರ ಏಶ್ಯನ್ ಗೇಮ್ಸ್ ನಲ್ಲಿ 3:00.56 ಸೆಕೆಂಡ್ ನಲ್ಲಿ ಗುರಿ ತಲುಪಿ ಚಿನ್ನ ಗೆದ್ದುಕೊಂಡಿತ್ತು.
Next Story





