ಹಿರೋಶಿಮಾ ದುರಂತದ 76ನೇ ವರ್ಷಾಚರಣೆ: ಭಾಷಣದ ಸಾಲುಗಳನ್ನು ಓದಲು ಮರೆತ ಜಪಾನ್ ಪ್ರಧಾನಿ
ಟೋಕಿಯೊ,ಆ.2: 76 ವರ್ಷಗಳ ಹಿಂದೆ ಹಿರೋಶಿಮಾ ನಗರದ ಮೇಲೆ ಪರಮಾಣು ಬಾಂಬ್ ದಾಳಿ ಯ ವರ್ಷಾಚರಣೆಯ ಕಾರ್ಯಕ್ರಮದಲ್ಲಿ ಭಾಷಣವನ್ನು ಓದುವಾಗ ತಾನು ಕೆಲವು ಸಾಲುಗಳನ್ನು ಆಕಸ್ಮಿಕವಾಗಿ ಬಿಟ್ಟಿದ್ದಕ್ಕಾಗಿ ಜಪಾನ್ ಪ್ರಧಾನಿ ಯೊಶಿಡೆ ಸುಗಾ ಅವರು ಕ್ಷಮೆಯಾಚಿಸಿದ್ದಾರೆ.
ಯೊಶಿಡಾ ಅವರು ಭಾಷಣದ ಪ್ರತಿಯ ಒಂದು ಪುಟವನ್ನು ಓದದೆ ಬಿಟ್ಟಿದ್ದರು. ಈ ಪ್ರಮಾದವನ್ನು ಸರಕಾರಿ ಸುದ್ದಿಸಂಸ್ಥೆ ಎನ್‌ಎಚ್‌ಕೆ ವರದಿ ಮಾಡಿದೆ.
ಕಾರ್ಯಕ್ರಮದ ಬಳಿಕ ಸುಗಾ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ನನ್ನ ಭಾಷಣದ ಕೆಲವು ಸಾಲುಗಳನ್ನು ಕೈಬಿಟ್ಟಿದ್ದಕ್ಕಾಗಿ ನಾನು ಕ್ಷಮೆಯಾಚಿಸ ಬಯಸುತ್ತೇನೆ’’ ಎಂದರು.
ಪರಮಾಣು ಬಾಂಬ್ ದಾಳಿಯಿಂದ ಬಾಧಿತವಾದ ಏಕೈಕ ರಾಷ್ಟ್ರ ಜಪಾನ್ ಆಗಿದೆ ಹಾಗೂ ಇಡೀ ವಿಶ್ವವನ್ನು ಅಣ್ವಸ್ತ್ರ ಮುಕ್ತವಾಗಿಸುವುದು ಅದರ ದೌತ್ಯವಾಗಿದೆ’ ಎಂಬ ಅಂಶಗಳನ್ನು ಸುಗಾ ಓದದೆ ಕೈಬಿಟ್ಟದ ಭಾಷಣದ ಸಾಲುಗಳು ಒಳಗೊಂಡಿದ್ದವು ಎದಂು ಕ್ಯೊಡೋ ನ್ಯೂಸ್ ವರದಿ ಮಾಡಿದೆ.
ಟೋಕಿಯೋ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಮೂಲಕ ಜಪಾನ್ ಕೊರೋನ ಸೋಂಕಿನ ಹಾವಳಿ ಹೆಚ್ಚಳಕ್ಕೆ ಕೊಡುಗೆ ನೀಡುತ್ತಿದೆಯೆಂಬ ಎಂಬ ಟೀಕೆಗಳನ್ನು ಅವರು ನಿರಾಕರಿಸಿದರು.





