48 ಕೋ. ರೂ. ಮೌಲ್ಯದ ಹೆರಾಯಿನ್ ವಶ

ಹೊಸದಿಲ್ಲಿ, ಆ. 6: ದಿಲ್ಲಿಯಲ್ಲಿ ಅತಿ ದೊಡ್ಡ ಹೆರಾಯಿನ್ ಸಾಗಾಟ ಜಾಲವನ್ನು ಭೇಧಿಸಿ 48 ಕೋಟಿ ರೂಪಾಯಿ ಮೌಲ್ಯದ 16 ಕಿ.ಗ್ರಾಂ. ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ನಾಲ್ವರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ.
ಹೆರಾಯಿನ್ ಕಳ್ಳ ಸಾಗಾಟ ಬೇಧಿಸಿರುವ ದಿಲ್ಲಿ ಪೊಲೀಸ್‌ನ ವಿಶೇಷ ತಂಡ, ಕಳ್ಳ ಸಾಗಾಟದ ರೂವಾರಿ ಮುಹಮ್ಮದ್ ಅಬ್ದುರ್ರಝಾಕ್, ಆತನ ಸಹವರ್ತಿಗಳಾದ ಶಹನವಾಝ್ ಹುಸೈನ್, ಸಚಿತ್ ಹಾಗೂ ಮುಹಮ್ಮದ್ ಇದ್ರಿಸ್ ಅಲಿಯನ್ನು ಬಂಧಿಸಿದ್ದಾರೆ. ಆರೋಪಿಗಳು ಬಳಸುತ್ತಿದ್ದ ಟ್ರಕ್ ಹಾಗೂ ಸ್ಕೂಟಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನು ಕಳೆದ ಮೂರ್ನಾಲ್ಕು ವರ್ಷಗಳಿಂದ ಹಲವು ಬಾರಿ ಮಣಿಪುರದಿಂದ ಹೆರಾಯನ್ ಸಾಗಾಟ ಮಾಡಿದ್ದೇನೆ ಎಂದು ವಿಚಾರಣೆ ವೇಳೆ ಶಹನವಾಝ್ ಪೊಲೀಸರಿಗೆ ತಿಳಿಸಿದ್ದಾನೆ.
Next Story





