ಒಲಿಂಪಿಕ್ಸ್: ಭಾರತದ ಕುಸ್ತಿಪಟು ಬಜರಂಗ್ ಗೆ ಕಂಚಿನ ಪದಕ

ಟೋಕಿಯೊ: ಭಾರತದ ಕುಸ್ತಿಪಟು ಬಜರಂಗ್ ಪುನಿಯಾ ಅವರು ಒಲಿಂಪಿಕ್ಸ್ ಪುರುಷರ ಫ್ರೀಸ್ಟೈಲ್ 65 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಶನಿವಾರ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಬಜರಂಗ್ ಅವರು ಕಝಖ್ ಸ್ತಾನದ ದೌಲತ್ ನಿಯಾಝ್ ಬೆಕೋವ್ ವಿರುದ್ಧ 8-0 ಅಂತರದಿಂದ ಜಯಶಾಲಿಯಾದರು. ಈ ಮೂಲಕ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.
ಬಜರಂಗ್ ಪದಕ ಗೆಲ್ಲುವುದರೊಂದಿಗೆ ಭಾರತವು ಪ್ರಸಕ್ತ ಒಲಿಂಪಿಕ್ಸ್ ನಲ್ಲಿ 2 ಬೆಳ್ಳಿ, 4 ಕಂಚು ಸಹಿತ ಒಟ್ಟು 6 ಪದಕಗಳನ್ನು ಜಯಿಸಿದೆ. ಇದರೊಂದಿಗೆ ಹಿಂದಿನ ಪದಕ ಗಳಿಕೆಯ ಸಾಧನೆಯನ್ನು ಸರಿಗಟ್ಟಿದೆ.
Next Story