ಬೆಂಗಳೂರು: ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣ; ವ್ಯವಸ್ಥಾಪಕ ಸೆರೆ

ಬೆಂಗಳೂರು, ಆ.7: ಪ್ರೀತಿ ನಿರಾಕರಿಸಿದ ಕಾರಣ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಪಿಜ್ಜಾ ಮಳಿಗೆಯ ವ್ಯವಸ್ಥಾಪಕನನ್ನು ಇಲ್ಲಿನ ಬಸವನಗುಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪುರುಷೋತ್ತಮ್ ಎಂಬಾತ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚಿಗೆ ಮಹಿಳಾ ಸಿಬ್ಬಂದಿ ಅನ್ನು ಪ್ರೀತಿಸುವಂತೆ ವ್ಯವಸ್ಥಾಪಕ ಪುರುಷೋತ್ತಮ್, ಕೋರಿಕೆದ್ದಾನೆ.ಆದರೆ, ಯುವತಿ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡು ಆರೊಪಿ ಯುವತಿಯ ಕಪಾಳಕ್ಕೆ ಗಂಭೀರವಾಗಿ ಹಲ್ಲೆ ಮಾಡಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿದ್ದ ಬಸವನಗುಡಿ ಠಾಣಾ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
Next Story





