ರಾಹುಲ್ ಗಾಂಧಿ ಟ್ವಿಟರ್ ಖಾತೆ ತಾತ್ಕಾಲಿಕ ಸ್ಥಗಿತ

ಹೊಸದಿಲ್ಲಿ, ಆ. 7: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಟ್ವಿಟರ್ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಶನಿವಾರ ಸಂಜೆ ಟ್ವೀಟ್ ಮೂಲಕ ತಿಳಿಸಿದೆ.
ರಾಹುಲ್ ಗಾಂಧಿ ಅವರ ಟ್ವೀಟರ್ ಖಾತೆ ಮರು ಸ್ಥಾಪನೆಗೆ ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತದೆ ಎಂದು ಅದು ಹೇಳಿದೆ.
‘‘ಅದುವರೆಗೆ ಅವರು ಸಾಮಾಜಿಕ ಜಾಲ ತಾಣದ ಇತರ ವೇದಿಕೆಯ ಮೂಲಕ ನಿಮ್ಮೆಲ್ಲರೊಂದಿಗೆ ಸಂಪರ್ಕ ಇರಿಸಿಕೊಳ್ಳಲಿದ್ದಾರೆ ಹಾಗೂ ಜನರ ಕುರಿತು ತನ್ನ ಧ್ವನಿ ಎತ್ತಲಿದ್ದಾರೆ. ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡಲಿದ್ದಾರೆ’’ ಎಂದು ಟ್ವೀಟ್ ಹೇಳಿದೆ.
ರಾಹುಲ್ ಗಾಂಧಿ ಅವರ ದಿಲ್ಲಿ ಅತ್ಯಾಚಾರ, ಹತ್ಯೆಗೊಳಗಾದ ಬಾಲಕಿಯ ಕುಟುಂಬಿಕರ ಛಾಯಾಚಿತ್ರವನ್ನು ಒಳಗೊಂಡ ಪೋಸ್ಟ್ ಅನ್ನು ಟ್ವಿಟರ್ ರದ್ದುಪಡಿಸಿದ ಬೆನ್ನಲ್ಲೇ, ಅವರ ಖಾತೆಯನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
Next Story





