ಟೋಕಿಯೊ ಒಲಿಂಪಿಕ್ಸ್: ಪುರುಷರ ಮ್ಯಾರಥಾನ್ ಪ್ರಶಸ್ತಿ ಉಳಿಸಿಕೊಂಡ ಕೀನ್ಯಾದ ಎಲಿಯುಡ್ ಕಿಪ್ಚೋಗೆ

ಟೋಕಿಯೊ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರವಿವಾರ ನಡೆದ ಪುರುಷರ ಮ್ಯಾರಥಾನ್ ಓಟದಲ್ಲಿ 2 ಗಂಟೆ 08 ನಿಮಿಷ 38 ಸೆಕೆಂಡುಗಳಲ್ಲಿ ಗುರಿ ತಲುಪಿದ ಕೀನ್ಯಾದ ಎಲಿಯುಡ್ ಕಿಪ್ಚೋಗೆ ಪ್ರಶಸ್ತಿಯನ್ನು ತನ್ನಲ್ಲೆ ಉಳಿಸಿಕೊಂಡರು. ಈ ಸಾಧನೆಯು ಮೂಲಕ ಮ್ಯಾರಥಾನ್ ನ ಅದ್ವಿತೀಯ ರಾಜನಾಗಿ ಹೊರಹೊಮ್ಮಿದರು.
ವಿಶ್ವ ದಾಖಲೆ ವಿಶ್ವ ದಾಖಲೆ ವೀರ ಕಿಪ್ಚೋಗೆ ಚಿನ್ನವನ್ನು ಗೆದ್ದುಕೊಂಡರು, ಸತತ ಮ್ಯಾರಥಾನ್ ಪ್ರಶಸ್ತಿಗಳನ್ನು ಗೆದ್ದ ಮೂರನೇ ಓಟಗಾರನೆಂಬ ಕೀರ್ತಿಗೆ ಭಾಜನರಾದರು.
ಟೋಕಿಯೊ ಕ್ರೀಡಾಕೂಟದ ಅಥ್ಲೆಟಿಕ್ಸ್ ಕಾರ್ಯಕ್ರಮದ ಅಂತಿಮ ಸ್ಪರ್ಧೆಯಲ್ಲಿ ನೆದರ್ಲೆಂಡ್ಸ್ ನ ಅಬ್ದಿ ನಗೆಯೆ 2: 09.58 ರಲ್ಲಿ ಗುರಿ ತಲುಪುವುದರೊಂದಿಗೆ ಬೆಳ್ಳಿ ಪಡೆದರು. ಬೆಲ್ಜಿಯಂನ ಬಶೀರ್ ಅಬ್ದಿ ಮೂರನೇ ಸ್ಥಾನ ಪಡೆದರು.
36 ರ ಹರೆಯದ ಕಿಪ್ಚೊಗೆ 2013 ರಿಂದ ಅವರು ಭಾಗವಹಿಸಿದ 15 ಮ್ಯಾರಥಾನ್ ಗಳಲ್ಲಿ 13 ನೇ ಗೆಲುವು ಪಡೆದರು.
Next Story