Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಪಿ.ಎ.ರೈಪಿ.ಎ.ರೈ9 Aug 2021 12:05 AM IST
share
ಓ ಮೆಣಸೇ...

ಸಿಎಂ ಬಸವರಾಜ ಬೊಮ್ಮಾಯಿ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ - ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ಉಪಮುಖ್ಯಮಂತ್ರಿ ಜೆಡಿಎಸ್‌ಗೆ ಸಿಗುತ್ತೆ ಎನ್ನುವ ನಿರೀಕ್ಷೆ ಇದ್ದಿರಬೇಕು.


ಯಡಿಯೂರಪ್ಪರಿಗೆ ಅಧಿಕಾರವಿಲ್ಲದೇ ಇದ್ದರೂ ಸಂಘಟನೆ ಹಾಗೂ ಅಭಿವೃದ್ಧಿಗೆ ಅವರ ಮಾರ್ಗದರ್ಶನ ಅತ್ಯಮೂಲ್ಯವಾಗಿರಲಿದೆ -ಬಿ.ವೈ.ರಾಘವೇಂದ್ರ, ಸಂಸದ
ಏನಿದ್ದರೂ ರಾಜ್ಯವನ್ನು ದೋಚುವುದರ ಬಗ್ಗೆ ಸುದೀರ್ಘ ಅನುಭವ ಇರುವವರಲ್ಲವೇ? ಮಾರ್ಗದರ್ಶನ ಬೇಕಾದೀತು.


ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ನಳಿನ್‌ಕುಮಾರ್ ಕಟೀಲು ನೇತೃತ್ವದಲ್ಲಿಯೇ ಎದುರಿಸಲಾಗುವುದು - ಕೆ.ಎಸ್.ಈಶ್ವರಪ್ಪ, ಸಚಿವ
ಅಂದರೆ ಅವರ ಕೈಯಲ್ಲೇ ರಾಜ್ಯಕ್ಕೆ ಬೆಂಕಿ ಕೊಡಲು ಹೊರಟಿದ್ದೀರಿ ಎಂದಾಯಿತು.


ತ್ರಿವಳಿ ತಲಾಖ್ ಕಾನೂನು ಜಾರಿಗೆ ಬಂದ ಬಳಿಕ ದಿಢೀರ್ ತ್ರಿವಳಿ ತಲಾಖ್ ಪ್ರಕರಣ ಗಣನೀಯವಾಗಿ ಕಡಿಮೆಯಾಗಿದೆ - ಮುಖ್ತಾರ್ ಅಬ್ಬಾಸ್ ನಖ್ವಿ, ಕೇಂದ್ರ ಸಚಿವ
ಹೌದು. ತಲಾಖ್ ಹೇಳದೆಯೇ ಹೆಂಡತಿಯನ್ನು ತೊರೆಯುವುದು ಜಾಣತನ ಎನ್ನುವುದು ಅವರಿಗೆ ಗೊತ್ತಾಗಿರಬೇಕು.


ರಾಜ್ಯದ ಜನರು ಕುರಿ,ಕೋಳಿ,ಮೀನಿಗಿಂತ ಗೋಮಾಂಸವನ್ನು ಹೆಚ್ಚಾಗಿ ತಿನ್ನಬೇಕು -ಸನ್ಬೋರ್ ಶುಲ್ಲೈ, ಮೇಘಾಲಯ ಸಚಿವ
ಯಾವ ಯಾವ ಬಿಜೆಪಿ ರಾಜ್ಯಗಳಲ್ಲಿ ಎನ್ನುವುದನ್ನೂ ಹೇಳಿ ಬಿಡಿ.


ರಾಜಕಾರಣಕ್ಕೂ ವಯಸ್ಸಿಗೆ ಸಂಬಂಧ ಇಲ್ಲ - ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ
ಮತ್ತೊಮ್ಮೆ ಪ್ರಧಾನಿ ಹುದ್ದೆ ಕೊಟ್ಟರೆ ಸ್ವೀಕರಿಸಲು ಸಿದ್ಧ ಎನ್ನುವ ಸಂದೇಶ.


ಮೈಸೂರು ರಾಜರನ್ನು ಎತ್ತಿಕಟ್ಟಿ ಸರ್.ಎಂ.ವಿಶ್ವೇಶ್ವರಯ್ಯರನ್ನು ತುಳಿಯುವ ಕೆಲಸ ನಡೆಯುತ್ತಿದೆ - ಡಾ.ಎಸ್.ಎಲ್.ಭೈರಪ್ಪ, ಸಾಹಿತಿ
ನಿಮ್ಮ ದೃಷ್ಟಿಯಲ್ಲಿ ಮೈಸೂರು ರಾಜರ ತಲೆ ಇರುವುದೇ ವಿಶ್ವೇಶ್ವರಯ್ಯರಂತವರು ತುಳಿಯುವುದಕ್ಕೆ ಇರಬೇಕು.


ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆಯ ದೃಷ್ಟಿಯಿಂದ ಉತ್ತರ ಪ್ರದೇಶವು ದೇಶದಲ್ಲೇ ಉನ್ನತ ಸ್ಥಾನದಲ್ಲಿದೆ - ಅಮಿತ್ ಶಾ, ಕೇಂದ್ರ ಸಚಿವ
ಕ್ರಿಮಿನಲ್‌ಗಳು ಪಡೆಯುತ್ತಿರುವ ಕಾನೂನು ರಕ್ಷಣೆಯ ಹಿನ್ನೆಲೆಯಲ್ಲಿ ಹೇಳಿರಬೇಕು.


(ಬಿಜೆಪಿ) ಕಪಾಳಕ್ಕೆ ಹೊಡೆದರೆ ನಾವು ಹೆದರುವುದಿಲ್ಲ. ಹೊಡೆದವರು ನೆಲಕಚ್ಚುವಂತೆ ಪ್ರತಿಯಾಗಿ ಕಪಾಳಕ್ಕೆ ಬಾರಿಸುತ್ತೇವೆ - ಉದ್ಧವ್ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ
ಏನು ಹೊಡೆದುಕೊಳ್ಳುವುದಿದ್ದರೂ ಮುಂದಿನ ವಿಧಾನಸಭಾ ಚುನಾವಣೆಯ ಒಳಗೆ ಹೊಡೆದುಕೊಳ್ಳಿ.


ಗಡ್ಡ ನನ್ನ ಐಡೆಂಟಿಟಿ - ಸಿ.ಟಿ.ರವಿ, ಶಾಸಕ

ಜನರಿಗೆ ಅದು ದಡ್ಡ ಎಂದು ಕೇಳಿಸಿತಂತೆ.


ಮಾಧ್ಯಮಗಳು ಖಾಸಗಿತನವನ್ನು ಗೌರವಿಸಬೇಕು - ಶಿಲ್ಪಾ ಶೆಟ್ಟಿ, ನಟಿ
ನಿಮ್ಮ ಖಾಸಗಿ ವಿಷಯಗಳು ವೀಡಿಯೊಗಳೊಳಗೆ ಬಂದರೆ?


ಭಾರತದಲ್ಲಿ ಬೆಲೆ ಏರಿಕೆಗೆ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರೇ ಕಾರಣ -ವಿಶ್ವಾಸ್ ಸಾರಂಗ್, ಮಧ್ಯಪ್ರದೇಶ ಸಚಿವ
ಅವರ ಕಾಲದಲ್ಲಿ ವಿಶ್ವದ ಮುಂದೆ ಭಾರತಕ್ಕೆ ಬೆಲೆ ಇತ್ತು. ನಿಮ್ಮ ಕಾಲದಲ್ಲಿ ಪೆಟ್ರೋಲ್‌ಗಷ್ಟೇ ಬೆಲೆ.


ಜೆಡಿಎಸ್ ಜಾತ್ಯತೀತ ಸಿದ್ಧಾಂತಕ್ಕೆ ತರ್ಪಣ ಬಿಟ್ಟು ಬಹಳದಿನಗಳಾದವು - ಸಿದ್ದರಾಮಯ್ಯ, ಮಾಜಿ ಸಿಎಂ
ಮತ್ತೇಕೆ ಅದರ ಜೊತೆ ಸೇರಿ ಸರಕಾರ ರಚಿಸಿದಿರಿ?


ಅಪ್ಪ-ಮಕ್ಕಳ ಪಕ್ಷ ಎಂಬುದು ಜೆಡಿಎಸ್‌ಗೆ ಮಾತ್ರ ಅನ್ವಯಿಸುತ್ತಿರುವುದು ಏಕೆಂದು ಅರ್ಥವಾಗುತ್ತಿಲ್ಲ - ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ
ಬೇರೆಲ್ಲ ಪಕ್ಷದಲ್ಲಿ ಅಪ್ಪ, ಮಕ್ಕಳ ಜೊತೆ ಇತರರೂ ಇರುತ್ತಾರೆ.


ಸಾಮೂಹಿಕ ನಾಯಕತ್ವದಲ್ಲೇ ಮುಂಬರುವ ಎಲ್ಲ ಚುನಾವಣೆಗಳನ್ನು ಎದುರಿಸಲಾಗುವುದು - ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ
ಆ ಸಾಮೂಹಿಕ ನಾಯಕತ್ವದಲ್ಲಿ ಯಡಿಯೂರಪ್ಪ ಕೂಡ ಇರುತ್ತಾರೆಯೇ?


ದೇಶದ ಯುವಕರು ಸತ್ಯವನ್ನು ಮಾತನಾಡಲು ಆರಂಭಿಸಿದ ದಿನವೇ ಮೋದಿ ನೇತೃತ್ವದ ಸರಕಾರ ಕುಸಿಯುತ್ತದೆ - ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ಮಾಧ್ಯಮಗಳು ಸತ್ಯವನ್ನು ಹೇಳಲಾರಂಭಿಸಿದ ದಿನ, ಯುವಕರು ಸತ್ಯವನ್ನು ಮಾತನಾಡಲಾರಂಭಿಸುತ್ತಾರೆ.


ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯಿಂದಾಗಿ ಪ್ರತಿಪಕ್ಷಗಳಿಗೆ ಕಲಾಪಗಳಲ್ಲಿ ಉತ್ತಮ ಚರ್ಚೆಯಲ್ಲಿ ತೊಡಗಲು ಸಾಧ್ಯವಾಗುತ್ತಿಲ್ಲ - ಪ್ರಹ್ಲಾದ್ ಜೋಶಿ, ಕೇಂದ್ರ ಸಚಿವ
ಮೋದಿಯವರ ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿಯಿಂದಲೇ ?


ಸಮಾಜದ ಶಾಸಕರನ್ನು ಡಿಸಿಎಂ ಮಾಡಿ, ಮಂತ್ರಿ ಮಾಡಿ ಎಂದು ಹೇಳುವ ಮಠಾಧೀಶರ ಗೊಡ್ಡು ಬೆದರಿಕೆಗೆ ಬಿಜೆಪಿಯಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ -ಕೆ.ಎಸ್.ಈಶ್ವರಪ್ಪ, ಸಚಿವ
ನಿಮ್ಮ ಪರವಾಗಿ ಗೊಡ್ಡು ಬೆದರಿಕೆ ಒಡ್ಡಿದ ಸ್ವಾಮೀಜಿಗಳಿಗೆ ನೀವು ಕೊಟ್ಟ ಕಿಮ್ಮತ್ತು ಎಷ್ಟು ?


ತಮಿಳುನಾಡಿನ ಒಪ್ಪಿಗೆ ಇಲ್ಲದೆ ಮೇಕೆದಾಟು ಯೋಜನೆ ಸಾಧ್ಯವಿಲ್ಲ - ಅಣ್ಣಾಮಲೈ, ತಮಿಳುನಾಡು ಬಿಜೆಪಿ ಅಧ್ಯಕ್ಷ
ಸಿಂಗಂ ಎಂದು ಸಂಭ್ರಮಿಸಿದ ಕರ್ನಾಟಕಕ್ಕೆ ಕೊನೆಗೂ ನರಿ ವೇಷ ಗೊತ್ತಾಗಿ ಹೋಯಿತು.


ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರಗಳು ಇದ್ದರೆ ಅದು ಅಭಿವೃದ್ಧಿಗೆ ಸಹಕಾರಿಯಾಗುತ್ತದೆ - ನರೇಂದ್ರ ಮೋದಿ, ಪ್ರಧಾನಿ
ಯಾರ ಅಭಿವೃದ್ಧಿಗೆ ಎನ್ನುವುದು ಕೂಡ ಮುಖ್ಯವೇ .


ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬೇಸರವಾಗಿಲ್ಲ, ಇದು ನನಗೆ ಅಭ್ಯಾಸವಾಗಿದೆ - ರಾಜುಗೌಡ, ಶಾಸಕ
ಬಂಡಾಯ ಕೂಡ ಬಿಜೆಪಿಗೆ ಅಭ್ಯಾಸವಾಗಿ ಬಿಟ್ಟಿದೆ.


ಬಿಜೆಪಿ -ಆರೆಸ್ಸೆಸ್‌ಅನ್ನು ಕಟ್ಟಿಹಾಕಲು ವಿಪಕ್ಷಗಳಿಗೆ ಒಗ್ಗಟ್ಟೊಂದೇ ಮಂತ್ರ - ರಾಹುಲ್‌ಗಾಂಧಿ, ಕಾಂಗ್ರೆಸ್ ನಾಯಕ
ನೀವು ಧರಿಸಿದ ಹಳೆಯ ಜನಿವಾರದಿಂದ ಕಟ್ಟಿ ಹಾಕಲು ಸಾಧ್ಯವೇ? ಎಂದು ಪ್ರಯತ್ನಿಸಿ ನೋಡಿ.


ಬಕೆಟ್ ಹಿಡಿಯುವವರಿಗೆ, ಬೆನ್ನಿಗೆ ಚೂರಿ ಹಾಕುವವರಿಗೆ ಬಿಜೆಪಿಯಲ್ಲಿ ಅವಕಾಶ ಸಿಗುತ್ತಿರುವುದು ನಿಜಕ್ಕೂ ದುರಂತ -ಸಿದ್ದು ಸವದಿ, ಶಾಸಕ
ಜನಸಾಮಾನ್ಯರ ಬೆನ್ನಿಗೆ ಚೂರಿ ಹಾಕುವುದಕ್ಕಿಂತ ವಾಸಿ.


ಡಾ.ಬಿ.ಆರ್.ಅಂಬೇಡ್ಕರ್ ನನಗೆ ಪ್ರೇರಕ ಶಕ್ತಿ. ಮತ್ತೊಂದು ಶಕ್ತಿ ಬಿ.ಎಸ್.ವಿಜಯೇಂದ್ರ. ಹಾಗಾಗಿ ಬಿಜೆಪಿ ಸೇರಿದೆ - ಎನ್.ಮಹೇಶ್, ಶಾಸಕ
ವಿಜಯೇಂದ್ರ ಅವರು ಅಂಬೇಡ್ಕರ್ ಅವರ ಇನ್ನೊಂದು ಅವತಾರ ಎನ್ನಲಿಲ್ಲವಲ್ಲ ... ಬಚಾವ್.


ನಾನೀಗ ಪ್ರತಿದಿನ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ - ರಮೇಶ್ ಜಾರಕಿಹೊಳಿ, ಮಾಜಿ ಸಚಿವ
ಯಾರ ಜೊತೆ ಎನ್ನುವುದನ್ನು ಬಹಿರಂಗಪಡಿಸದಿರಿ.


ಮುಂದಿನ ಬಾರಿ ಬಿಜೆಪಿಯಿಂದ ರಾಷ್ಟ್ರೀಯವಾದಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ - ಕೆ.ಎಸ್.ಈಶ್ವರಪ್ಪ, ಸಚಿವ
ಹೊಡಿ, ಬಡಿ, ಕೊಲ್ಲು ಎಂದು ನೀವು ಬೊಬ್ಬಿಡುತ್ತಿರುವುದು ನೋಡಿದರೆ ಆ ರಾಷ್ಟ್ರೀಯವಾದಿ ನೀವೇ ಇರಬೇಕು.


ಎಸ್ಸಿ-ಎಸ್ಟಿ ವರ್ಗದ ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಸೆಳೆಯುವ ಕೆಲಸವಾಗಬೇಕು - ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ದಲಿತರಿಗೆ ಮುಖ್ಯಮಂತ್ರಿ ಹುದ್ದೆ ಕೊಡುವ ಮೂಲಕ ಆ ಕೆಲಸ ಮಾಡಿ.


ಬೊಮ್ಮಾಯಿ ಹೆಸರಿಗಷ್ಟೇ ಮುಖ್ಯಮಂತ್ರಿ. ಅಧಿಕಾರ ನಡೆಸುತ್ತಿರುವುದೆಲ್ಲ ಬಿಜೆಪಿ, ಆರೆಸ್ಸೆಸ್ - ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ನಾಯಕ
ಅವಕಾಶ ಕೊಟ್ಟರೆ ಕಾಂಗ್ರೆಸನ್ನು ಕೂಡ ನಾವೇ ನಡೆಸುತ್ತೇವೆ ಎನ್ನುತ್ತಿದ್ದಾರೆ ಆರೆಸ್ಸೆಸ್ ನಾಯಕರು.


ಅಫ್ಘಾನಿಸ್ತಾನದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡಲು ಅಮೆರಿಕದ ದಿಢೀರ್ ಸೇನಾ ವಾಪಸಾತಿ ನಿರ್ಧಾರವೇ ಕಾರಣ - ಅಶ್ರಫ್‌ಘನಿ, ಅಫ್ಘಾನಿಸ್ತಾನದ ಅಧ್ಯಕ್ಷ
ರಶ್ಯನ್ನರನ್ನು ಓಡಿಸಲು ಅಮೆರಿಕ ತಾಲಿಬಾನ್ ನ್ನು ಸೃಷ್ಟಿಸಿದಾಗಲೇ ಅಫ್ಘಾನಿಸ್ತಾನದ ಪರಿಸ್ಥಿತಿ ಹದಗೆಟ್ಟಿತ್ತು.

share
ಪಿ.ಎ.ರೈ
ಪಿ.ಎ.ರೈ
Next Story
X