ಶಾಸಕ ಝಮೀರ್ ಅಹ್ಮದ್ ಗೆ ಈಡಿ ನೋಟಿಸ್
ಬೆಂಗಳೂರು, ಆ.9: ಇತ್ತೀಚಿಗೆ ದಾಳಿ ನಡೆಸಿದ ಪ್ರಕರಣ ಸಂಬಂಧ ಕಾಂಗ್ರೆಸ್ ಶಾಸಕ ಝಮೀರ್ ಅಹ್ಮದ್ ಖಾನ್ಗೆ ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ.
ದಾಳಿಯಲ್ಲಿ ವಶಪಡಿಸಿಕೊಂಡಿರುವ ದಾಖಲೆಗಳ ಸಂಬಂಧ ಝಮೀರ್ ಅಹ್ಮದ್ ಮಾಹಿತಿ ನೀಡಿ ಅಗತ್ಯ ವಿವರಗಳನ್ನು 10 ದಿನಗಳೊಳಗೆ ಸಲ್ಲಿಸಿ ಸ್ಪಷ್ಟನೆ ನೀಡುವಂತೆ ಅಧಿಕಾರಿಗಳು ನೋಟಿಸ್ನಲ್ಲಿ ಸೂಚಿಸಿದ್ದಾರೆ.
ಆ.5 ರಂದು ಝಮೀರ್ ಅಹ್ಮದ್ ಖಾನ್ ಅವರ ಕಂಟೋನ್ಮೆಟ್ ರೈಲು ನಿಲ್ದಾಣದ ಬಳಿಯ ಮನೆ ಕಚೇರಿ ಫ್ಲಾಟ್ ಮೇಲೆ ಈಡಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಕೆಲ ದಾಖಲೆಗಳಲ್ಲಿನ ಆಸ್ತಿ, ವಸ್ತುಗಳು ಪತ್ತೆಯಾದ ಹಿನ್ನೆಲೆಯಲ್ಲಿ ಈಡಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
Next Story