ಬೆಳ್ತಂಗಡಿ: ಸಂಯುಕ್ತ ಪ್ರಭುಗೆ ಎಸೆಸೆಲ್ಸಿಯಲ್ಲಿ 625 ಅಂಕ
![ಬೆಳ್ತಂಗಡಿ: ಸಂಯುಕ್ತ ಪ್ರಭುಗೆ ಎಸೆಸೆಲ್ಸಿಯಲ್ಲಿ 625 ಅಂಕ ಬೆಳ್ತಂಗಡಿ: ಸಂಯುಕ್ತ ಪ್ರಭುಗೆ ಎಸೆಸೆಲ್ಸಿಯಲ್ಲಿ 625 ಅಂಕ](https://www.varthabharati.in/sites/default/files/images/articles/2021/08/9/301955-1628520364.jpeg)
ಬೆಳ್ತಂಗಡಿ : ತಾಲೂಕಿನ ಲಾಯಿಲ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಂಯುಕ್ತ ಡಿ. ಪ್ರಭು ಅವರು ಎಸೆಸೆಲ್ಸಿ ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದುಕೊಂಡು ಶ್ರೇಷ್ಠ ಸಾಧನೆ ಮಾಡಿದ್ದಾರೆ.
ಈಕೆ ಬೆಳ್ತಂಗಡಿಯ ವಿಘ್ನೇಶ್ ಮೆಡಿಕಲ್ ಮಾಲಕ ದಾಮೋದರ ಪ್ರಭು ಮತ್ತು ಡಾ. ಅರ್ಚನ ಪ್ರಭು ದಂಪತಿಯ ಪುತ್ರಿ.
ಕೊರೋನ ಸಮಸ್ಯೆಗಳ ನಡುವೆಯೂ ಶಿಕ್ಷಕರ ಹಾಗೂ ಪೋಷಕರ ಸಹಕಾರದಿಂದ ಉತ್ತಮ ಸಾಧನೆ ಮಾಡಲು ಸಾಧ್ಯವಾಯಿತು. ಪಾಠದ ವಿಚಾರದಲ್ಲಿ ಯಾವುದೇ ಅನುಮಾನಗಳಿದ್ದರೂ ಶಾಲೆಯ ಶಿಕ್ಷಕರು ಪರಿಹರಿಸುತ್ತಿದ್ದರು. ಆನ್ ಲೈನ್ ತರಗತಿಗಳಲ್ಲಿ ಅಥವಾ ಶಾಲೆಗೆ ಹೋದರೆ ಸಾದ ಶಿಕ್ಷಕರು ಮಾರ್ಗದರ್ಶನ ಮಾಹಿತಿ ನೀಡುತ್ತಿದ್ದರು ಇದರಿಂದಾಗಿ ಈ ಸಾಧನೆ ಸಾಧ್ಯವಾಯಿತು ಎನ್ನುತ್ತಾಳೆ ಸಂಯುಕ್ತ ಪ್ರಭು.
Next Story