ಮುಹರ್ರಂ ಚಂದ್ರದರ್ಶನ
![ಮುಹರ್ರಂ ಚಂದ್ರದರ್ಶನ ಮುಹರ್ರಂ ಚಂದ್ರದರ್ಶನ](https://www.varthabharati.in/sites/default/files/images/articles/2021/08/9/301961-1628523128.jpg)
ಮಂಗಳೂರು, ಆ.9: ಮುಹರ್ರಂ ತಿಂಗಳ ಚಂದ್ರದರ್ಶನವಾಗಿದೆ ಎಂದು ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ನಿರ್ದೇಶನದಂತೆ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಸಹಾಯಕ ಖತೀಬ್ ಅಬ್ದುಲ್ ಹಮೀದ್ ಮುಸ್ಲಿಯಾರ್ ತಿಳಿಸಿದ್ದಾರೆ.
ಮಂಗಳವಾರ ಚಾಂದ್ 1 ಆಗಿದ್ದು, ಆ.18 ಮತ್ತು 19ರಂದು ಉಪವಾಸ ಸುನ್ನತ್ ಇದೆ ಎಂದು ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರದಿಂದ ಮುಹರ್ರಂ ಪ್ರಾರಂಭ ಎಂದು ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ ಸಂಯುಕ್ತ ಜಮಾಅತ್ ಹಾಗೂ ದ.ಕ ಜಿಲ್ಲೆ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಅವರೂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story