ಟ್ವೆಂಟಿ-20 ಕ್ರಿಕೆಟ್:ಆಸ್ಟ್ರೇಲಿಯ 62 ರನ್ ಗೆ ಆಲೌಟ್, ಬಾಂಗ್ಲಾದೇಶಕ್ಕೆ ಸರಣಿ

photo : twitter/@ESPNcricinfo
ಢಾಕಾ: ಐದನೇ ಹಾಗೂ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯವನ್ನು ಕನಿಷ್ಠ ಟ್ವೆಂಟಿ-20 ಮೊತ್ತಕ್ಕೆ ಕಟ್ಟಿಹಾಕಿದ ಬಾಂಗ್ಲಾದೇಶ 5 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ.
ಸೋಮವಾರ ನಡೆದ ಪಂದ್ಯದಲ್ಲಿ ಗೆಲ್ಲಲು 123 ರನ್ ಗುರಿ ಪಡೆದ ಆಸ್ಟ್ರೇಲಿಯ 13.4 ಓವರ್ ಗಳಲ್ಲಿ 62 ರನ್ ಗೆ ಆಲೌಟಾಯಿತು. ನಾಯಕ ಮ್ಯಾಥ್ಯೂ ವೇಡ್ ಗರಿಷ್ಠ ಸ್ಕೋರ್ (22) ಗಳಿಸಿದರು. ಆಲ್ ರೌಂಡರ್ ಶಾಕಿಬ್ ಅಲ್ ಹಸನ್(4-9) ಹಾಗೂ ಮುಹಮ್ಮದ್ ಸೈಫುದ್ದೀನ್ (3-12) ಒಟ್ಟು ಏಳು ವಿಕೆಟ್ ಗಳನ್ನು ಉರುಳಿಸಿ ಬಾಂಗ್ಲಾದೇಶ 60 ರನ್ ಅಂತರದಿಂದ ಗೆಲುವು ಸಾಧಿಸಲು ನೆರವಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಬಾಂಗ್ಲಾದೇಶ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಗಳಿಸಿತ್ತು.
Next Story