ಅವಿಭಜಿತ ದ.ಕ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇನೆ - ಸಚಿವ ಸುನೀಲ್ ಕುಮಾರ್

ಮಂಗಳೂರು, ಆ.9: ಅವಿಭಜಿತ ದ.ಕ ಜಿಲ್ಲೆಯ ಅಭಿವೃದ್ಧಿ ಗೆ ಶ್ರಮಿಸುತ್ತೇವೆ ಎಂದು ರಾಜ್ಯದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಹಾಗೂ ಇಂಧನ ಖಾತೆಯ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಅವರು ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಕಚೇರಿಗೆ ಭೇಟಿ ನೀಡಿದ ಸಂದರ್ಭ ದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ನಾನು ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿ ಸೇರಿ ಇಂದು ಸಚಿವನಾಗುವ ಅವಕಾಶ ಲಭಿಸಿದೆ. ನಾನು ಎಬಿವಿಪಿ, ಭಜರಂಗದಳದ ಕಾರ್ಯ ಕರ್ತನಾಗಿ, ದತ್ತ ಪೀಠ ಅಭಿಯಾನದ ರಾಜ್ಯ ಸಂಚಾಲಕನಾಗಿ ಕಾರ್ಯ ನಿರ್ವಹಿಸಿದ್ದೇನೆ.15 ವರುಷ ಶಾಸಕನಾಗಿ ಕಾರ್ಯ ನಿರ್ವಹಿಸಿದ್ದು ಪಕ್ಷಕ್ಕೆ ಮುಜುಗರ ವಾಗುವ ರೀತಿಯಲ್ಲಿ ನಾನು ನಡೆದುಕೊಂಡಿಲ್ಲ ಎನ್ನುವ ಆತ್ಮತೃಪ್ತಿ ನನಗಿದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ.
2004 ರಲ್ಲಿ ಮಾರ್ಚ್ ತಿಂಗಳಲ್ಲಿ ಸಂಘದ ಶಿಬಿರ ನಡಸುವ ಜವಾಬ್ದಾರಿ ಕಾರ್ಕಳದಲ್ಲಿ ನನಗೆ ಕೊಟ್ಟಿದ್ದರು. ಇದೇ ಸಂದರ್ಭದಲ್ಲಿ ನನಗೆ ಒಂದು ಸಂದೇಶವೂ ಬಂತು ನನಗೆ ಶಾಸಕನಾಗುವ ಅವಕಾಶ ಪಕ್ಷ ನೀಡಿದೆ ಎಂದು ಸುನಿಲ್ ಕುಮಾರ್ ತಾನು ಶಾಸಕನಾದ ಆರಂಭದ ದಿನಗಳನ್ನು ಮೆಲುಕು ಹಾಕಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಎರಡು ಜಿಲ್ಲೆಗಳು ಈಗ ವಿಂಗಡಣೆಯಾಗಿದ್ದರೂ ಎರಡೂ ಜಿಲ್ಲೆಗಳ ಅಭಿವೃದ್ಧಿಗೆ ಇಲ್ಲಿನ ಸಚಿವರು, ಸಂಸದರು, ಶಾಸಕರು ಹಿರಿಯ ನಾಯ ಕರ ಮಾರ್ಗದರ್ಶನದೊಂದಿಗೆ ಶ್ರಮಿಸುವುದಾಗಿ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡಬಿದ್ರೆ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡ ರಾದ ಸಂತೋಷ್ ಕುಮಾರ್ ಬೊಳಿಯಾರ್, ರವಿಶಂಕರ್ ಮಿಜಾರ್ ,ಉದಯ ಕುಮಾರ್, ರಾಜೇಶ್ ಕಾವೇರಿ,ಕಸ್ತೂರಿ ಪಂಜ, ರಾಮ ದಾಸ್, ಸುಧೀರ್ ಶೆಟ್ಟಿ ಕಣ್ಣೂರು, ರಾಜ ಗೋಪಾಲ ರೈ ಮೊದಲಾ ದ ವರು ಉಪಸ್ಥಿತರಿದ್ದರು.
ಸಚಿವರಿಂದ ಪೊಳಲಿ, ಕುದ್ರೋಳಿ, ಮಂಗಳಾದೇವಿ ದೇವಸ್ಥಾನ ಗಳಿಗೆ ಭೇಟಿ :- ರಾಜ್ಯ ಸಚಿವ ಸಂಪುಟದ ನೂತನ ಸಚಿವರಾದ ಬಳಿಕ ಜಿಲ್ಲೆಗೆ ಪ್ರಥಮ ಭೇಟಿ ನೀಡಿದ ಸುನಿಲ್ ಕುಮಾರ್ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಬಳಿಕ ಜಿಲ್ಲಾ ಬಿಜೆಪಿ ಕಚೇರಿ, ಸಂಘ ನಿಕೇತನ, ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರ, ಶ್ರೀ ಮಂಗಳಾದೇವಿ ದೇವಸ್ಥಾನಗಳಿಗೆ ಭೇಟಿ ನೀಡಿ ಬೆಂಗಳೂರಿಗೆ ತೆರಳಿದ್ದಾರೆ.
.jpg)







