ದ.ಕ. ಜಿಲ್ಲೆ : ಕೋವಿಡ್ಗೆ ಮೂರು ಬಲಿ; 273 ಮಂದಿಗೆ ಕೊರೋನ ಸೋಂಕು
![ದ.ಕ. ಜಿಲ್ಲೆ : ಕೋವಿಡ್ಗೆ ಮೂರು ಬಲಿ; 273 ಮಂದಿಗೆ ಕೊರೋನ ಸೋಂಕು ದ.ಕ. ಜಿಲ್ಲೆ : ಕೋವಿಡ್ಗೆ ಮೂರು ಬಲಿ; 273 ಮಂದಿಗೆ ಕೊರೋನ ಸೋಂಕು](https://www.varthabharati.in/sites/default/files/images/articles/2021/08/9/302005-1628532642.jpg)
ಮಂಗಳೂರು, ಆ.9: ದ.ಕ. ಜಿಲ್ಲೆಯಲ್ಲಿ ಸೋಮವಾರ ಕೋವಿಡ್ಗೆ ಮೂವರು ಬಲಿಯಾಗಿದ್ದು, 273 ಮಂದಿಗೆ ಸೋಂಕು ತಗುಲಿದೆ.ಜಿಲ್ಲೆಯಲ್ಲಿ 364 ಮಂದಿ ಗುಣಮುಖರಾಗಿದ್ದಾರೆ. ಶೇ.3.52ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ.
ಜಿಲ್ಲೆಯಲ್ಲಿನ 1,03,457 ಸೋಂಕಿತರ ಪೈಕಿ 98,667 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1469 ಮಂದಿ ಬಲಿಯಾಗಿ ದ್ದಾರೆ. 3,321 ಸಕ್ರಿಯ ಪ್ರಕರಣಗಳಿವೆ.ಜಿಲ್ಲೆಯಲ್ಲಿ 83,450 ಮಾಸ್ಕ್ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1,01,29,617 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story