ಇಸ್ರೇಲ್ ನ ಎನ್ಎಸ್ಒ ಗ್ರೂಪ್ ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ: ರಾಜ್ಯಸಭೆಗೆ ತಿಳಿಸಿದ ರಕ್ಷಣಾ ಸಚಿವಾಲಯ

ಹೊಸದಿಲ್ಲಿ, ಆ. 9: ಇಸ್ರೇಲ್ ಮೂಲದ ಕಂಪೆನಿ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ ಎಂದು ರಕ್ಷಣಾ ಸಚಿವಾಲಯ ಸೋಮವಾರ ರಾಜ್ಯಸಭೆಯಲ್ಲಿ ತಿಳಿಸಿತು.
ವಿವಾದಾತ್ಮಕ ಸ್ಪೈವೇರ್ ಇಸ್ರೇಲ್ ಮೂಲದ ಕಂಪೆನಿ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ನ ಉತ್ಪಾದನೆ. ಸಿಪಿಐ (ಮಾಕ್ಸಿಸ್ಟ್)ನ ರಾಜ್ಯಸಭಾ ಸದಸ್ಯ ವಿ. ಶಿವದಾಸನ್ ಅವರ ಪ್ರಶ್ನೆಗೆ ಲಿಖಿತ ಪ್ರತಿಕ್ರಿಯೆ ನೀಡಿದ ರಕ್ಷಣಾ ಖಾತೆಯ ಸಹಾಯಕ ಸಚಿವ ಅಜಯ್ ಭಟ್, ‘‘ರಕ್ಷಣಾ ಸಚಿವಾಲಯ ಎನ್ಎಸ್ಒ ಗ್ರೂಪ್ ಟೆಕ್ನಾಲಜಿಸ್ನೊಂದಿಗೆ ಯಾವುದೇ ವಹಿವಾಟು ನಡೆಸಿಲ್ಲ’’ ಎಂದರು.
ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ನೊಂದಿಗೆ ಕೇಂದ್ರ ಸರಕಾರ ಯಾವುದಾದರೂ ವಹಿವಾಟು ನಡೆಸಿದೆಯೇ? ನಡೆಸಿದ್ದರೆ, ಅದರ ವಿವರ ನೀಡಲಿ ಎಂದು ವಿ. ಶಿವದಾಸನ್ ಪ್ರಶ್ನಿಸಿದರು. ಭಾರತದಲ್ಲಿ ಪೆಗಾಸಸ್ ಸ್ಪೈವೇರ್ ಬಳಕೆಯ ಕುರಿತು ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ನೇರ ಹಾಗೂ ಅಧಿಕೃತ ಪ್ರತಿಕ್ರಿಯೆ ನೀಡಿದೆ.
Next Story





