ಬೆಂಗಳೂರು: ಪರೀಕ್ಷೆ ನಡೆಸಿದ 1 ಗಂಟೆಯೊಳಗೆ ಎರಡು ಬಗೆಯ ಕೋವಿಡ್ ವರದಿ!

ಬೆಂಗಳೂರು, ಆ.10: ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಪರೀಕ್ಷೆಗೆ ಒಳಗಾದ ಕುಟುಂಬಕ್ಕೆ ಕೋವಿಡ್ ವರದಿಗಳಿಂದ ಆತಂಕ ವ್ಯಕ್ತವಾಗಿದ್ದು, 1 ಗಂಟೆಯೊಳಗೆ ನೆಗಟಿವ್, ಪಾಸಿಟಿವ್ ಎರಡೂ ಫಲಿತಾಂಶ ಹೊರಬಿದ್ದಿದೆ.
ಬಿಬಿಎಂಪಿ ವ್ಯಾಪ್ತಿಯ ಕೋಣನಕುಂಟೆ ವಾರ್ಡ್‍ನಲ್ಲಿ ಈ ಘಟನೆ ನಡೆದಿದ್ದು, ಒಂದೇ ಮನೆಯ ಮೂವರು ಇತ್ತೀಚಿಗೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆ. ಆದರೆ, ಎರಡು ದಿನಗಳ ಬಳಿಕ ಮೊದಲು ಮೂರು ಜನರಿಗೆ ನೆಗಟಿವ್ ಫಲಿತಾಂಶ ಬಂದಿದೆ. ಅದಾದ ಸ್ವಲ್ಪ ಹೊತ್ತಿನಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ.
ಇದರಿಂದ ಮನೆಯವರಿಗೆ ಆತಂಕ ವ್ಯಕ್ತವಾಗಿದ್ದು, ಯಾವ ವರದಿಯನ್ನು ನಂಬಬೇಕು ಎನ್ನುವ ಗೊಂದಲ ಉಂಟಾಗಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ.
Next Story





