ಎಸೆಸೆಲ್ಸಿ ಫಲಿತಾಂಶ : ಅಲ್-ಇಹ್ಸಾನ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಮುಹಮ್ಮದ್ ಸಲೀತ್ 600 ಅಂಕ, ಮುಹಮ್ಮದ್ ರಾಝಿ 570 ಅಂಕ
ಕಾಪು, ಆ.10: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿರುವ ಮೂಳೂರು ಅಲ್ ಇಹ್ಸಾನ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಒಟ್ಟು 141 ವಿದ್ಯಾರ್ಥಿಗಳಲ್ಲಿ 9 ವಿದ್ಯಾರ್ಥಿಗಳು ಎ ಪ್ಲಸ್ ಗ್ರೇಡ್, 14 ವಿದ್ಯಾರ್ಥಿಗಳು ಎ ಗ್ರೇಡ್, 84 ವಿದ್ಯಾರ್ಥಿಗಳು ಬಿ ಗ್ರೇಡ್, 34 ವಿ್ಯಾರ್ಥಿ ಗಳು ಸಿ ಗ್ರೇಡ್ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಮುಹಮ್ಮದ್ ಸಲೀತ್ 600 (ಶೇ.96), ಅಫ್ನಾ ಫಾತಿಮಾ 597 (ಶೇ.95.52), ಅಝ್ಮಿಯಾ 592 (ಶೇ.94.72), ಉಝ್ಮಿ ಅಬ್ದುಲ್ ಹಮೀದ್ 590 (ಶೇ.94.40), ತನಿಶಾ ಝೊಹಾರಾ 588(ಶೇ.94.08), ಸಫಾ ಫಾತಿಮಾ 580(ಶೇ.92.80), ಮುಹಮ್ಮದ್ ರಾಝಿ 570(ಶೇ.91.20), ಎ.ಎಸ್.ರಾಹಿನಾ 569(ಶೇ.91.04), ಆಯಿಶಾ ಝುಲ್ಫಾ 566(90.56) ಅಂಕಗಳನ್ನು ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story





