ವಂಚನೆ ಪ್ರಕರಣ: ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿಯಿಂದ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ

ಬೆಂಗಳೂರು, ಆ.10: ಬಿಜೆಪಿ ಮುಖಂಡರ ಹೆಸರು ಹೇಳಿ ವಂಚಿಸುತ್ತಿದ್ದ ಆರೋಪಿ ಯುವರಾಜ್ ಸ್ವಾಮಿ ವಿರುದ್ಧ ಸಿಸಿಬಿ ಪೊಲೀಸರು ನಗರದ 1ನೆ ಎಸಿಎಂಎಂ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ.
ಆರೋಪಿ ಯುವರಾಜ್ ಸ್ವಾಮಿ ರಾಜ್ಯಪಾಲರ ಹುದ್ದೆ ಸೇರಿ ಹಲವು ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂ.ಹಣ ಪಡೆದು ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು.
ಈ ಸಂಬಂಧ 9 ಮಂದಿ ಸಾಕ್ಷಿಗಳ ಸಮೇತ ಸಿಸಿಬಿ ಪೊಲೀಸರು ಸ್ವಾಮಿ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಿದ್ದಾರೆ. ಇನ್ನು ಈ ಕೃತ್ಯವನ್ನು ಪೊಲೀಸರ ಮುಂದೆ ಯುವರಾಜ್ ಒಪ್ಪಿಕೊಂಡಿದ್ದಾನೆ ಎಂದು ಚಾರ್ಜ್‍ಶೀಟ್‍ನಲ್ಲಿ ಸಿಸಿಬಿ ಪೊಲೀಸರು ಉಲ್ಲೇಖಿಸಿದ್ದಾರೆ. ಈತನ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಸೇರಿ ಒಟ್ಟು 14 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ.
ಆರೋಪಿ ಸ್ವಾಮಿ ರಾಜ್ಯಪಾಲರ ಹುದ್ದೆ, ಸರಕಾರಿ ನೌಕರಿ, ಮೆಡಿಕಲ್ ಸೀಟ್, ನಿಗಮ-ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ನಂಬಿಸಿ ಹಲವು ಜನರಿಂದ ಕೋಟ್ಯಂತರ ರೂ.ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿವೆ.





