ಆ.12: ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು, ಆ.10: ನಗರದ ವಿವಿಧೆಡೆ ವಿದ್ಯುತ್ ಫೀಡರ್‌ಗಳಲ್ಲಿ ದುರಸ್ತಿ, ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದರಿಂದ ಆ.12ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಬಜ್ಪೆ: ನಗರದ ಹೊರವಲಯದ ಬಜ್ಪೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕಟೀಲು, ಪೆರಾರ, ಈಶ್ವರಕಟ್ಟೆ, ಕಳವಾರು, ಪೆರ್ಮುದೆ, ಬಜಪೆ ಟೌನ್, ಸುಂಕದಕಟ್ಟೆ, ವಾಟರ್ ಸಪ್ಲೈ ಫೀಡರ್‌ಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ.
ಇದರಿಂದ ಪೆರ್ಮುದೆ, ಭಟ್ರಕೆರೆ, ಕಣಿಕಟ್ಟ, ಹುಣ್ಸೆಕಟ್ಟೆ, ತೆಂಕ ಎಕ್ಕಾರು, ಎಕ್ಕಾರು, ಬಜಪೆ, ಕಿನ್ನಿಪದವು, ಈಶ್ವರಕಟ್ಟೆ, ಮುರ, ಶಾಸ್ತಾವು, ಕಿನ್ನಿಕಂಬ್ಳ, ಮೂಡುಪೆರಾರ, ಕೊಳಪಿಲ, ಅರಿಕೆಪದವು, ಶಾಲೆಪದವು, ಕೊಂಪದವು, ಕರಿಕುಮೇರು, ಕಾಪಿಕಾಡು, ನೆಲ್ಲಿಗುಡ್ಡೆ, ಕತ್ತಲ್ ಸಾರ್, ಸೌಹಾರ್ದನಗರ, ಸಿದ್ದಾರ್ಥ ನಗರ, ಜರಿನಗರ, ಅಂಬಿಕಾನಗರ, ಸುಂಕದಕಟ್ಟೆ, ಕಳವಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
ನಂದಿಗುಡ್ಡ: 33/11ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11ಕೆವಿ ಮಂಗಳಾದೇವಿ ಫೀಡರ್‌ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಂಡಿದ್ದು, ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಇದರಿಂದ ಮಂಗಳಾನಗರ, ಸುಭಾಶ್ ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಹೊಯ್ಗೆಬಝಾರ್, ಗೂಡ್‌ಶೆಡ್, ಮಂಕೀಸ್ಟಾಂಡ್, ಮಂಗಳಾದೇವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ನೆಹರೂ ಮೈದಾನ: 33/11 ಕೆವಿ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ 11 ಕೆವಿ ಪಾಂಡೇಶ್ವರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಇದರಿಂದ ಅಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಎ.ಬಿ.ಶೆಟ್ಟಿ ಸರ್ಕಲ್, ಭಾರತೀಯ ವಿಶ್ವವಿದ್ಯಾಭವನ, ಎಸ್.ಪಿ. ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಅಮೃತ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.







