ಯಾದಗಿರಿ: ದೇವಾಲಯಕ್ಕೆ ಹೊರಟಿದ್ದ ಮಹಿಳೆಯ ಅತ್ಯಾಚಾರ ಆರೋಪ; ಆಟೊ ಚಾಲಕ ಸೇರಿ ಇಬ್ಬರ ಬಂಧನ

ಯಾದಗಿರಿ, ಆ.10: ದೇವಾಲಯಕ್ಕೆ ಹೊರಟಿದ್ದ ಮಹಿಳೆಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪ ಇಲ್ಲಿನ ಶಹಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿಬಂದಿದೆ.
ಮದ್ಯದ ಅಮಲಿನಲ್ಲಿ ಆಟೊ ಚಾಲಕ ಸೇರಿ ಇಬ್ಬರು, 45 ವರ್ಷದ ಮಹಿಳೆಯನ್ನು ಅಪಹರಿಸಿ ಈ ಕೃತ್ಯವೆಸಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆ.8ರಂದು ದೇವಸ್ಥಾನದಿಂದ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯನ್ನು ಅಡ್ಡ ಹಾಕಿದ ಆರೋಪಿಗಳು ಯಾದಗಿರಿ-ಶಹಾಪುರ ಮಾರ್ಗದ ಮಧ್ಯೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಶಹಾಪುರ ಪೊಲೀಸ್ ಠಾಣೆಗೆ ಸಂತ್ರಸ್ತೆ ದೂರು ನೀಡಿದ್ದಾರೆ.
ದೂರಿನ್ವಯ ರಾಜು(21), ವೀರೇಶ್(25) ಎಂಬುವರನ್ನು ಪೊಲೀಸರು ಬಂಧಿಸಿ, ತನಿಖೆ ಕೈಗೊಂಡಿದ್ದಾರೆ.
Next Story





