ದ.ಕ. ಜಿಲ್ಲೆ : ಕೋವಿಡ್ಗೆ ಎಂಟು ಬಲಿ; 378 ಮಂದಿಗೆ ಕೊರೋನ ಸೋಂಕು
ಮಂಗಳೂರು, ಆ.10: ದ.ಕ. ಜಿಲ್ಲೆಯಲ್ಲಿ ಮಂಗಳವಾರ ಕೋವಿಡ್ಗೆ ಎಂಟು ಮಂದಿ ಬಲಿಯಾಗಿದ್ದು, 378 ಮಂದಿಗೆ ಸೋಂಕು ತಗುಲಿದೆ. ಜಿಲ್ಲೆ ಯಲ್ಲಿ 359 ಮಂದಿ ಗುಣಮುಖರಾಗಿದ್ದಾರೆ. ಶೇ.4.28ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ. ಜಿಲ್ಲೆಯಲ್ಲಿನ 1,03,835 ಸೋಂಕಿತರ ಪೈಕಿ 99,026 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್ಗೆ ಇಲ್ಲಿಯವರೆಗೆ 1477 ಮಂದಿ ಬಲಿಯಾಗಿದ್ದಾರೆ. 3,332 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ 83,563 ಮಾಸ್ಕ್ ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ 1,01,42,017ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಡಳಿತದ ಪ್ರಕಟನೆ ತಿಳಿಸಿದೆ.
Next Story