ಜೆಡಿಎಸ್ ಪಕ್ಷದವರು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲದವರು: ಸಿದ್ದರಾಮಯ್ಯ

ಮಂಡ್ಯ, ಆ.10: ಜೆಡಿಎಸ್‍ನವರು ತಮ್ಮ ಉಳಿವಿಗಾಗಿ ಯಾವಾಗ, ಏನಾದರೂ ಮಾಡುತ್ತಾರೆ. ಏಕೆಂದರೆ ಅವರು ಜಾತ್ಯತೀತ ತತ್ವದಲ್ಲಿ ನಂಬಿಕೆ ಇಲ್ಲದವರು, ಅವಕಾಶವಾದಿಗಳು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಮಂಗಳವಾರ ಬೆಂಗಳೂರಿನಿಂದ ಮೈಸೂರಿಗೆ ತೆರಳುವ ಮಾರ್ಗಮಧ್ಯೆ ಮದ್ದೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್‍ನವರಿಗೆ ತಮ್ಮ ಕೆಲಸಗಳು ಆಗಬೇಕು, ಅವರ ಎಂಎಲ್‍ಎಗಳನ್ನು ಉಳಿಸಿಕೊಳ್ಳಬೇಕು. ಹಾಗಾಗಿ ಬಿಜೆಪಿ ಜತೆ ಚೆನ್ನಾಗಿ ಇರುತ್ತಾರೆ ಎಂದರು.
ಝಮೀರ್ ಅಹಮದ್ ಮನೆ ಮೇಲಿನ ಈ ಡಿ ದಾಳಿ ವಿಚಾರದಲ್ಲಿ ಕುಮಾರಸ್ವಾಮಿ ವಿರುದ್ಧ ನಾನೇನು ಮಾತನಾಡಿಲ್ಲ. ‘ಕುಂಬಳಕಾಯಿ ಕಳ್ಳ ಹೆಗಲುಮುಟ್ಟಿ ನೋಡಿಕೊಂಡಂತೆ ತಾನು ಯಾರ ವಿರುದ್ಧವೂ ಫಿರ್ಯಾದು ಕೊಟ್ಟಿಲ್ಲವೆಂದು ಕುಮಾರಸ್ವಾಮಿಯೇ ಹೇಳಿದ್ದಾರೆ ಎಂದು ಟಾಂಗ್ ನೀಡಿದರು.
Next Story





