ಮಂಗಳೂರು; ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ಗಾಂಜಾ ಸಾಗಾಟ: ಆರೋಪಿ ವಶಕ್ಕೆ

ಮಂಗಳೂರು, ಆ.10: ಜಿಲ್ಲಾ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗೆ ನೀಡಲು ಕೊಂಡೊಯ್ಯುತ್ತಿದ್ದ ಅನಾನಸ್‌ನಲ್ಲಿ ಗಾಂಜಾ ಇರುವುದನ್ನು ಭದ್ರತಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.
ಅಬ್ದುಲ್ ಮಜೀದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆ.9ರಂದು ಆರೋಪಿ ಮಜೀದ್ ಜೈಲಿನಲ್ಲಿರುವ ರಾಜಪ್ಪ ಎಂಬಾತನಿಗೆ ವಸ್ತುಗಳನ್ನು ನೀಡಲು ಬಂದಿದ್ದ ಎನ್ನಲಾಗಿದ್ದು, ವಸ್ತುಗಳನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುವ ಸಂದರ್ಭ ಎಕ್ಸ್‌ರೇ ಬ್ಯಾಗೇಜ್‌ನಲ್ಲಿ ಅನಾನಸ್ ಹಣ್ಣಿನೊಳಗೆ ಅನುಮಾನಾಸ್ಪದ ವಸ್ತು ಕಂಡು ಬಂದಿದೆ. ಕೂಡಲೇ ಹಣ್ಣನ್ನು ಒಡೆದು ನೋಡಿದಾಗ ಹಣ್ಣಿನೊಳಗೆ ಸಣ್ಣ ಪ್ಲಾಸ್ಟಿಕ್‌ನಲ್ಲಿ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಮಜೀದ್ ನನ್ನು ಬರ್ಕೆ ಪೊಲೀಸರಿಗೆ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





