Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಿಜೆಪಿ ಸಂಸದನನ್ನು ಬೆಂಬಲಿಸುತ್ತಿದ್ದ...

ಬಿಜೆಪಿ ಸಂಸದನನ್ನು ಬೆಂಬಲಿಸುತ್ತಿದ್ದ ನಕಲಿ ಖಾತೆಗಳ ಕುರಿತು ಫೇಸ್ಬುಕ್ ತಡವಾಗಿ ಕ್ರಮ ಕೈಗೊಂಡಿತ್ತು: ಮಾಜಿ ಉದ್ಯೋಗಿ

Theprint.in ವರದಿ

ವಾರ್ತಾಭಾರತಿವಾರ್ತಾಭಾರತಿ11 Aug 2021 7:45 PM IST
share
ಬಿಜೆಪಿ ಸಂಸದನನ್ನು ಬೆಂಬಲಿಸುತ್ತಿದ್ದ ನಕಲಿ ಖಾತೆಗಳ ಕುರಿತು ಫೇಸ್ಬುಕ್ ತಡವಾಗಿ ಕ್ರಮ ಕೈಗೊಂಡಿತ್ತು: ಮಾಜಿ ಉದ್ಯೋಗಿ

ಹೊಸದಿಲ್ಲಿ,ಆ.11: ಫೇಸ್ಬುಕ್ 2019ರಲ್ಲಿ ಬಿಜೆಪಿ ಸಂಸದರೋರ್ವರಿಗೆ ಲಿಂಕ್ ಮಾಡಲಾಗಿದ್ದ ನಕಲಿ ಖಾತೆಗಳ ನೆಟ್ವರ್ಕ್ ಅನ್ನು ತೆಗೆದುಹಾಕುವುದನ್ನು ವಿಳಂಬಿಸಿತ್ತು ಎಂದು ಕಂಪನಿಯ ಮಾಜಿ ಡಾಟಾ ಸೈಂಟಿಸ್ಟ್ ಸೋಫಿ ಝಾಂಗ್ ಬಹಿರಂಗಗೊಳಿಸಿದ್ದಾರೆ. ಆದರೆ ಇಂತಹ ಇತರ ಮೂರು ನೆಟ್ವರ್ಕ್ ಗಳ ವಿರುದ್ಧ ಫೇಸ್ಬುಕ್ ತಕ್ಷಣವೇ ಕ್ರಮವನ್ನು ಕೈಗೊಂಡಿತ್ತು ಎಂದು ಅವರು ಹೇಳಿದ್ದಾರೆ.

 ಇತರ ಮೂರು ನೆಟ್ವರ್ಕ್ ಗಳ ಪೈಕಿ ಒಂದು ಬಿಜೆಪಿಯನ್ನು ಬೆಂಬಲಿಸಿದ್ದರೆ ಇನ್ನೆರಡು ನೆಟ್ವರ್ಕ್ ಗಳು ಕಾಂಗ್ರೆಸ್ ಪರವಾಗಿದ್ದವು ಮತ್ತು ಎಲ್ಲ ನಾಲ್ಕೂ ನೆಟ್ವರ್ಕ್ ಗಳನ್ನು ಏಕಕಾಲದಲ್ಲಿ ಪತ್ತೆ ಹಚ್ಚಲಾಗಿತ್ತು ಎಂದು ಝಾಂಗ್ ಅವರನ್ನು ಉಲ್ಲೇಖಿಸಿ ThePrint ಸುದ್ದಿ ಜಾಲತಾಣ  ವರದಿ ಮಾಡಿದೆ.

ಅನಧಿಕೃತ ಖಾತೆಗಳನ್ನು ಒಳಗೊಂಡಿದ್ದ ಈ ನಾಲ್ಕು ನೆಟ್ವರ್ಕ್ ಗಳು ಫೇಸ್ಬುಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಿರ್ದಿಷ್ಟ ರಾಜಕಾರಣಿಗಳನ್ನು ಬೆಂಬಲಿಸಲು ರಾಜಕೀಯ ಸಂದೇಶಗಳನ್ನು ಪ್ರಚಾರ ಮಾಡುತ್ತಿದ್ದವು. ಆದರೆ ಈ ನೆಟ್ವರ್ಕ್‌ ಗಳು ದ್ವೇಷ ಭಾಷಣ ಅಥವಾ ತಪ್ಪು ಮಾಹಿತಿಗಳನ್ನು ಹರಡುತ್ತಿರುವುದು ಕಂಡುಬಂದಿರಲಿಲ್ಲ ಎಂದು ThePrint ಗೆ ನೀಡಿದ ಸಂದರ್ಶನದಲ್ಲಿ ಝಾಂಗ್ ತಿಳಿಸಿದರು.

ಬಿಜೆಪಿ ಸಂಸದನ ಹೆಸರನ್ನು ಅವರು ಬಹಿರಂಗಗೊಳಿಸಲಿಲ್ಲ. ಇತರ ಮೂರು ನೆಟ್ವರ್ಕ್ ಗಳನ್ನು ರಾಜಕಾರಣಿಗಳು ಬೆಂಬಲಿಸುತ್ತಿದ್ದರು ಎನ್ನುವುದಕ್ಕೆ ಯಾವುದೇ ಸಾಕ್ಷಾಧಾರಗಳಿರಲಿಲ್ಲ ಎಂದು ಅವರು ಹೇಳಿದರು.

2019ರ ಡಿಸೆಂಬರ್ ಸುಮಾರಿಗೆ ತಾನು ಈ ನೆಟ್ವರ್ಕ್ ಗಳನ್ನು ಪತ್ತೆ ಹಚ್ಚಿದ್ದೆ ಎಂದು 2018 ಜನವರಿಯಿಂದ 2020 ಸೆಪ್ಟೆಂಬರ್ವರೆಗೆ ಫೇಸ್ಬುಕ್ ನೊಂದಿಗೆ ಕಾರ್ಯ ನಿರ್ವಹಿಸಿದ್ದ ಝಾಂಗ್ ತಿಳಿಸಿದರು. ಇತರ ಮೂರು ನೆಟ್ವರ್ಕ್ ಗಳನ್ನು ಅದೇ ತಿಂಗಳಲ್ಲಿ ತೆಗೆದುಹಾಕಲಾಗಿತ್ತಾದರೂ ತಾನು 2020 ಸೆಪ್ಟೆಂಬರ್ನಲ್ಲಿ ಕಂಪನಿಯನ್ನು ತೊರೆಯುವವರೆಗೆ ನಾಲ್ಕನೆಯ ನೆಟ್ವರ್ಕ್ ಸಕ್ರಿಯವಾಗಿತ್ತು ಎಂದು ಅವರು ಹೇಳಿದರು.

ಬ್ರಿಟಿಷ್ ದೈನಿಕ ‘ದಿ ಗಾರ್ಡಿಯನ್’ 2021,ಎಪ್ರಿಲ್ ನಲ್ಲಿ ಪ್ರಕಟಿಸಿದ್ದ ವರದಿಯೊಂದಕ್ಕೆ ಫೇಸ್ಬುಕ್ ನೀಡಿದ್ದ ಉತ್ತರವನ್ನು ಝಾಂಗ್ ಉಲ್ಲೇಖಿಸಿದರು. ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಫೇಸ್ಬುಕ್ ತಿಳಿಸಿತ್ತಾದರೂ ಇದು ತಾತ್ಕಾಲಿಕವಾಗಿರಬಹುದು ಎಂಬ ಸುಳಿವನ್ನೂ ನೀಡಿತ್ತು.
  
ಕೆಲವು ನೆಟ್ವರ್ಕ್ ಗಳನ್ನು ತಾನು ಮೇ 2020ರಲ್ಲಿ ನಿಷ್ಕ್ರಿಯಗೊಳಿಸಿದ್ದೇನೆ ಮತ್ತು ಇತರ ನೆಟ್ವರ್ಕ್ಗಳ ಮೇಲೆ ನಿಗಾವನ್ನು ಮುಂದುವರಿಸಿದ್ದೇನೆ. ತಜ್ಞರ ತಂಡವೊಂದು ಈ ಖಾತೆಗಳನ್ನು ಪರಿಶೀಲಿಸಿತ್ತು ಮತ್ತು ಕೆಲವೇ ಖಾತೆಗಳು ಅವುಗಳನ್ನು ತೆಗೆದುಹಾಕುವ ಅಗತ್ಯದ ಮಟ್ಟವನ್ನು ಮುಟ್ಟಿರಲಿಲ್ಲ,ಆದಾಗ್ಯೂ ಅವು ಈಗ ಸಕ್ರಿಯವಾಗಿಲ್ಲ ಎಂದು ಫೇಸ್ಬುಕ್ ದೈನಿಕಕ್ಕೆ ತಿಳಿಸಿತ್ತು.

ಖಾತೆಗಳು ನಿಷ್ಕ್ರಿಯಗೊಂಡಿದ್ದರೂ ಮುಂದಿನ ನಾಲ್ಕು ತಿಂಗಳುಗಳಲ್ಲಿ ಅವು ಮರಳಿ ಸಕ್ರಿಯಗೊಂಡಿದ್ದವು ಎಂದು ಝಾಂಗ್ ತಿಳಿಸಿದರು.

ThePrint ಪ್ರತಿಕ್ರಿಯೆಯನ್ನು ಕೋರಿ ಫೇಸ್ಬುಕ್ ಕಂಪನಿಯನ್ನು ಸಂಪರ್ಕಿಸಿದ್ದು,‘ನಮ್ಮ ವೇದಿಕೆಯ ದುರುಪಯೋಗವನ್ನು ತಡೆಯಲು ನಾವು ಆದ್ಯತೆ ನೀಡಿದ್ದೇವೆ ಮತ್ತು ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ವಿಶ್ವಾದ್ಯಂತ ನಮ್ಮ ವೇದಿಕೆಯ ದುರುಪಯೋಗವನ್ನು ತಡೆಯಲೆಂದೇ ತಜ್ಞರ ತಂಡವೊಂದನ್ನು ನಾವು ಹೊಂದಿದ್ದೇವೆ. ಝಾಂಗ್ ಅವರ ಬಣ್ಣನೆಯನ್ನು ನಾವು ಒಪ್ಪುವುದಿಲ್ಲ ’ಎಂದು ಅದು ತಿಳಿಸಿದೆ.

‘ಸಂಘಟಿತ ಅನಧಿಕೃತ ನಡವಳಿಕೆಯ 150ಕ್ಕೂ ಅಧಿಕ ನೆಟ್ವರ್ಕ್ ಗಳನ್ನು ನಾವು ತೆಗೆದುಹಾಕಿದ್ದೇವೆ. ಈ ಪೈಕಿ ಅರ್ಧದಷ್ಟು ನೆಟ್ವರ್ಕ್ ಗಳು ದೇಶಿಯ ನೆಟ್ವರ್ಕ್ ಗಳಾಗಿದ್ದು ಭಾರತ ಸೇರಿದಂತೆ ವಿಶ್ವಾದ್ಯಂತ ಕಾರ್ಯ ನಿರ್ವಹಿಸುತ್ತಿದ್ದವು’ ಎಂದು ಕಂಪನಿಯು ಹೇಳಿಕೊಂಡಿದೆ.
 
ಫೇಸ್ಬುಕ್ ಕಳೆದ ವರ್ಷವೂ ಇಂತಹುದೇ ಆರೋಪಗಳನ್ನು ಎದುರಿಸಿತ್ತು. ಅದು ತನ್ನ ವೇದಿಕೆಯಲ್ಲಿ ಬಿಜೆಪಿ ನಾಯಕನೋರ್ವನ ದ್ವೇಷ ಭಾಷಣದ ವಿರುದ್ಧ ಕ್ರಮವನ್ನು ಕೈಗೊಳ್ಳಲು ನಿರಾಕರಿಸಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿತ್ತು. ಫೇಸ್ಬುಕ್ನ ಈ ನಡವಳಿಕೆ ಭಾರತದಲ್ಲಿಯ ತನ್ನ ಅತ್ಯಂತ ದೊಡ್ಡ ಮಾರುಕಟ್ಟೆಯಲ್ಲಿ ತನ್ನ ಉದ್ಯಮ ಭವಿಷ್ಯಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಪ್ರಯತ್ನವಾಗಿತ್ತು ಎನ್ನಲಾಗಿದೆ.
‌
ಸದ್ರಿ ಬಿಜೆಪಿ ನಾಯಕ ಹಾಗೂ ಪಕ್ಷದಲ್ಲಿಯ ಆತನ ಇಬ್ಬರು ಸಹೋದ್ಯೋಗಿಗಳ ವಿವಾದಾತ್ಮಕ ಪೋಸ್ಟ್ ಗಳ ಕುರಿತು ತನ್ನ ವರದಿಗಾರರು ಪ್ರಶ್ನೆಗಳನ್ನೆತ್ತಿದ ಬಳಿಕವೇ ಅವುಗಳನ್ನು ಫೇಸ್ಬುಕ್ ತೆಗೆದುಹಾಕಿತ್ತು ಎಂದೂ ವಾಲ್ ಸ್ಟ್ರೀಟ್ ಜರ್ನಲ್ ತಿಳಿಸಿತ್ತು.
ಆಗಲೂ ಫೇಸ್ಬುಕ್ ಆರೋಪಗಳನ್ನು ನಿರಾಕರಿಸಿತ್ತು. ವಿಷಯದ ಜನಪ್ರಿಯತೆಯನ್ನು ಹೆಚ್ಚಿಸಲು ನಕಲಿ ಖಾತೆಗಳನ್ನು ಬಳಸುವುದು ಫೇಸ್ಬುಕ್ ನ ಸಮುದಾಯ ಮಾನದಂಡಗಳಿಗೆ ವಿರುದ್ಧವಾಗಿದೆ.

ನಕಲಿ ಖಾತೆಗಳನ್ನು ಹೇಗೆ ಗುರುತಿಸಲಾಗುತ್ತದೆ ಎಂಬ ಪ್ರಶ್ನೆಗೆ ಝಾಂಗ್,ತೀರ ಇತ್ತೀಚಿನ ಖಾತೆಯ ಸೃಷ್ಟಿಯ ದಿನಾಂಕ, ಸ್ನೇಹಿತರು ಅಥವಾ ಮಾಹಿತಿಯ ಅನುಪಸ್ಥಿತಿ, ಪ್ರೊಫೈಲ್ ಚಿತ್ರ ಇಲ್ಲದಿರುವುದು ಅಥವಾ ಕಂಪ್ಯೂಟರ್ ನಲ್ಲಿ ಸೃಷ್ಟಿಸಲಾದ ಪ್ರೊಫೈಲ್ ಚಿತ್ರಗಳು ಇವೆಲ್ಲ ಸಂಭಾವ್ಯ ನಕಲಿ ಖಾತೆಯ ಎಚ್ಚರಿಕೆಯ ಸಂಕೇತಗಳಾಗಿವೆ. ಫೇಸ್ಬುಕ್ ಐಪಿ ವಿಳಾಸಗಳನ್ನು ಮತ್ತು ಸಾರ್ವಜನಿಕವಾಗಿ ಲಭ್ಯವಿರುವ ವೆಬ್ಸೈಟ್ ನೋಂದಣಿ ಮಾಹಿತಿಯನ್ನೂ ಪರಿಶೀಲಿಸುತ್ತದೆ ಎಂದು ಉತ್ತರಿಸಿದರು.
 
2019ರಲ್ಲಿ ಪತ್ತೆಯಾಗಿದ್ದ ನಾಲ್ಕು ಭಾರತ ಸಂಬಂಧಿ ನೆಟ್ವರ್ಕ್ ಗಳು ಹಲವಾರು ಡಝನ್ಗಳಿಂದ ಹಿಡಿದು ಹಲವಾರು ನೂರರವರೆಗೆ ಖಾತೆಗಳನ್ನು ಒಳಗೊಂಡಿದ್ದವು. ಬಿಜೆಪಿ ಸಂಸದನ ಜೊತೆ ಲಿಂಕ್ ಹೊಂದಿದ್ದ ನೆಟ್ವರ್ಕ್ 54 ಖಾತೆಗಳನ್ನು ಒಳಗೊಂಡಿತ್ತು. ಅತ್ಯಂತ ದೊಡ್ಡ ನೆಟ್ವರ್ಕ್ 1,090 ಖಾತೆಗಳನ್ನು ಒಳಗೊಂಡಿದ್ದು ಅದು ಮೊದಲು ಪಂಜಾಬಿನಲ್ಲಿ ಕಾಂಗ್ರೆಸ್ ಅನ್ನು ಬೆಂಬಲಿಸುತ್ತಿತ್ತು ಮತ್ತು ನಂತರ 2020ರ ದಿಲ್ಲಿ ಚುನಾವಣೆ ಸಂದರ್ಭದಲ್ಲಿ ಆಪ್ ಅನ್ನು ಬೆಂಬಲಿಸಲು ಆರಂಭಿಸಿತ್ತು. ಈ ನಿಟ್ಟಿನಲ್ಲಿ ಅದು ಬಿಜೆಪಿ ಮತ್ತು ಪ್ರಧಾನಿ ಮೋದಿಯನ್ನು ಬೆಂಬಲಿಸುವಂತೆ ನಟಿಸಿ ವಿಶ್ವಾಸಾರ್ಹತೆಯನ್ನು ಗಳಿಸಿಕೊಳ್ಳುವ ವಿಲಕ್ಷಣ ತಂತ್ರವನ್ನು ಬಳಸಿತ್ತು. ಉದಾಹರಣೆಗೆ ವಿಷಯಗಳು ‘ನಾನು ಮೋದಿಗೆ ಮತ ಹಾಕಿದ್ದೇನೆ ಮತ್ತು ಅವರು ಈಗ ರಾಷ್ಟ್ರಮಟ್ಟದಲ್ಲಿ ಮತಗಳನ್ನು ಗಳಿಸುತ್ತಿದ್ದಾರೆ,ಈಗ ದಿಲ್ಲಿಯಲ್ಲಿ ಅರವಿಂದ ಕೇಜ್ರಿವಾಲ್ ಅವರನ್ನು ಬೆಂಬಲಿಸುವ ಸಮಯವಾಗಿದೆ ’ಎಂಬಂತಹ ಪೋಸ್ಟ್ ಗಳನ್ನು ಒಳಗೊಂಡಿರುತ್ತಿದ್ದವು ಎಂದು ಹೇಳಿದ ಝಾಂಗ್, ಎರಡು ಪಕ್ಷಗಳು ಪರಸ್ಪರರಿಗೆ ಗೊತ್ತಿಲ್ಲದೆ ಒಂದೇ ಮಾರ್ಕೆಟಿಂಗ್ ಸಂಸ್ಥೆಯನ್ನು ಬಳಸಿಕೊಳ್ಳುವುದು ಇಂತಹ ಚಟುವಟಿಕೆಗೆ ಕಾರಣವಾಗಿರಬಹುದು ಅಅಥವಾ ಇದು ಕೇವಲ ಕಾಕತಾಳೀಯವೂ ಆಗಿರಬಹುದು ಎಂದರು.

‘ನಾನು ಆಕ್ಷೇಪಾರ್ಹ ನೆಟ್ವರ್ಕ್ ಗಳನ್ನು ಪತ್ತೆ ಹಚ್ಚಿದಾಗ ಇಂತಹ ನೆಟ್ವರ್ಕ್ ಗಳು ಒಳ್ಳೆಯದಲ್ಲ ಮತ್ತು ಇವುಗಳನ್ನು ತೆಗೆದುಹಾಕಬೇಕು ಎಂದು ಕಂಪನಿಯು ಒಪ್ಪಿಕೊಂಡಿತ್ತು. ಮೂರು ನೆಟ್ವರ್ಕ್ ಗಳನ್ನು ತೆಗೆದುಹಾಕಿದ ನಾವು ನಾಲ್ಕನೆಯದನ್ನು ತೆಗೆಯಲು ಮುಂದಾದಾಗ ಅದನ್ನು ಲೋಕಸಭಾ ಸದಸ್ಯರೋರ್ವರು ಅಥವಾ ಅವರ ಯಾರೋ ನಿಕಟವರ್ತಿ ನಿರ್ವಹಿಸುತ್ತಿದ್ದಾರೆ ಎನ್ನುವುದು ನಮಗೆ ಗೊತ್ತಾಗಿತ್ತು ಮತ್ತು ನಾನು ಕಂಪನಿಯನ್ನು ತೊರೆಯುವವರೆಗೂ ಆ ನೆಟ್ವರ್ಕ್ ಅನ್ನು ತೆಗೆದಿರಲಿಲ್ಲ ’ಎಂದು ಝಾಂಗ್ ಆರೋಪಿಸಿದರು.

ಕೃಪೆ: Theprint.in

share
ವಾರ್ತಾಭಾರತಿ
ವಾರ್ತಾಭಾರತಿ
Next Story
X