ಸಚಿವ ಈಶ್ವರಪ್ಪರನ್ನು ನಿಮ್ಹಾನ್ಸ್‍ಗೆ ಸೇರಿಸಲು ಆಗ್ರಹ: ಎನ್‍ಎಸ್‍ಯುಐ ಪ್ರತಿಭಟನೆ
ಬೆಂಗಳೂರು, ಆ.11: ಕಾಂಗ್ರೆಸ್ ನಾಯಕರ ಕುರಿತು ವಿವಾದಿತ ಹೇಳಿಕೆ ನೀಡಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಎನ್‍ಎಸ್‍ಯುಐ ಸಂಘಟನೆಯ ಸದಸ್ಯರು ಆಗ್ರಹಿಸಿದರು.
ಬುಧವಾರ ಇಲ್ಲಿನ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಗೃಹ ಇಲಾಖೆ ಈ ಕೂಡಲೇ ಈಶ್ವರಪ್ಪ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎನ್‍ಎಸ್‍ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್, ಬರೀ ಮಾತಿಗಷ್ಟೇ ಕೆ.ಎಸ್.ಈಶ್ವರಪ್ಪ ಅವರು ಭಾರತಮಾತೆ, ಸಂಸ್ಕೃತಿ, ದೇಶಭಕ್ತಿ ಎನ್ನುತ್ತಾರೆ. ಆದರೆ, ಇದೀಗ ನಿಜಬಣ್ಣ ಬಯಲಾಗಿದೆ. ಸದ್ಯ ಅರೆ ಹುಚ್ಚನಂತೆ ಮಾತನಾಡುತ್ತಿರುವ ಸಚಿವ ಈಶ್ವರಪ್ಪರವರನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎನ್‍ಎಸ್‍ಯುಐ ಸಂಘಟನೆಯ ರಫೀಕ್, ಮಾರುತಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
Next Story





