ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ
ಬ್ರಹ್ಮಾವರ, ಆ.11: ಕುಕ್ಕೆಹಳ್ಳಿ ಒಳಮಡಿ ನಿವಾಸಿ ನಾಗೇಶ್ ನಾಯ್ಕ(40) ಎಂಬವರು ಆ.9ರಂದು ಬೆಳಗ್ಗೆ ಮನೆಯಿಂದ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಹಂಗಳೂರು ಕೋಡಿ ರಸ್ತೆಯ ಚರ್ಚ್ ಬಳಿಯ ನಿವಾಸಿ ರಾಧಾ ಎಂಬವರ ಮಗ ಅಕ್ಷಯ ಬಿ.ಆರ್.(19) ಎಂಬವರು ಆ.10ರಂದು ಬೆಳಗ್ಗೆ ಕೊರೋನಾ ಲಸಿಕೆ ಹಾಕಿಸಿಕೊಂಡು ಬರುವುದಾಗಿ ಮನೆಯಿಂದ ಹೋದವನು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





