ಉಡುಪಿ: ನಗರ ಪ್ರದೇಶದಲ್ಲಿ ಆ.12ರಂದು ಲಸಿಕೆ ಇಲ್ಲ
ಉಡುಪಿ, ಆ.11: ಉಡುಪಿಯ ನಗರ ಪ್ರದೇಶದಲ್ಲಿ ಆ.12ರಂದು ಸಾರ್ವಜನಿಕರಿಗೆ ಕೋವಿಡ್-19ರ ಯಾವುದೇ ಲಸಿಕಾ ಶಿಬಿರ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರು ಕೋವಿಡ್-19 ಪ್ರಥಮ ಹಾಗೂ 2ನೇ ಡೋಸ್ ಲಸಿಕೆಯನ್ನು ಪಡೆಯಲು ಸಮೀಪದ ಸರಕಾರಿ ಆಸ್ಪತ್ರೆ ಯಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯವಿದ್ದಲ್ಲಿ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆಯುವಂತೆ ಅವರು ತಿಳಿಸಿದ್ದಾರೆ.
Next Story





