ವಿದೇಶಕ್ಕೆ ಹಾರಿದ ಅಫ್ಘಾನ್ ವಿತ್ತ ಸಚಿವ
ಕಾಬೂಲ್,ಆ.11: ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ತಾಲಿಬಾನ್ ಬಂಡುಕೊರರು ಅಫ್ಘಾನಿಸ್ತಾನದ ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡಿರುವ ಬೆನ್ನಲ್ಲೇ ಅಫ್ಘಾನಿಸ್ತಾನದ ಹಾಲಿ ವಿತ್ತ ಸಚಿವ ಖಾಲಿದ್ ಪಾಯೆಂಡಾ ಅವರು ತನ್ನ ಹುದ್ದೆಗೆ ರಾಜೀನಾಮೆ ನೀಡಿ, ವಿದೇಶಕ್ಕೆ ತೆರಳಿದ್ದಾರೆ.
ತಾಲಿಬಾನ್ ಬಂಡುಕೋರರು ಕಳೆದ ಶುಕ್ರವಾರದಿಂದೀಚೆಗೆ ಫೈಝಾಬಾದ್, ಫರಾಹ್, ಪುಲೆ ಖುಮ್ರಿ, ಸರೇಪುಲ್, ಶೆಬೆರ್ಗಾನ್, ಐಬಾಕ್, ಕುಂಡುಝ್, ತಾಲುಖಾನ್ ಹಾಗೂ ಝಾರಂಜಿ ಸೇರಿದಂತೆ 9 ಪ್ರಾಂತಗಳನ್ನು ವಶಪಡಿಸಿಕೊಂಡಿವೆ.
ಅಫ್ಘಾನಿಸ್ತಾನದಿಂದ ಅಮೆರಿಕ ನೇತೃತ್ವದ ವಿದೇಶಿ ಪಡೆಗಳ ಅಂತಿಮ ನಿರ್ಗಮನವು ಮೇ ತಿಂಗಳಲ್ಲಿ ಆರಂಭಗೊಂಡ ಬಳಿಕ ತಾಲಿಬಾನ್ ಬಂಡುಕೋರರು ಸರಣಿ ದಾಳಿಗನ್ನು ನಡೆಸುತ್ತಿವೆ. ಈಗಾಗಲೇ ತಾಲಿಬಾನ್ ಗ್ರಾಮಾಂತರ ಪ್ರದೇಶಗಳ ಬಹುತೇಕ ಭಾಗಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
Next Story





