ಸ್ವಪಕ್ಷೀಯ ಶಾಸಕರ ಪ್ರತಿಭಟನೆ ಬಿಜೆಪಿ ದುರಾಡಳಿತಕ್ಕೆ ಕನ್ನಡಿ: ಕಾಂಗ್ರೆಸ್ ಟೀಕೆ

ಬೆಂಗಳೂರು, ಆ.12: ಸ್ವಪಕ್ಷದ ಶಾಸಕರೇ ಪ್ರತಿಭಟಿಸುತ್ತಿರುವುದು ಬಿಜೆಪಿ ದುರಾಡಳಿತಕ್ಕೆ ಕನ್ನಡಿ. ಕಳೆದ 2 ವರ್ಷದಿಂದ ಭೂಕುಸಿತ, ಪ್ರವಾಹದಿಂದಾಗಿ ರಾಜ್ಯದ ಜನರು ಹೈರಾಣಾಗಿದ್ದಾರೆ, 25 ಸಂಸದರಿದ್ದೂ, ಡಬಲ್ ಇಂಜಿನ್ ಸರಕಾರಗಳಿದ್ದೂ ನಯಾಪೈಸೆ ಪರಿಹಾರ ಕೊಡಲಾಗದ ಮೇಲೆ ಬಿಜೆಪಿಗೆ ಏಕೆ ಅಧಿಕಾರ? ‘ಆತ್ಮ'ವಿದ್ದರೆ ಆತ್ಮವಿಮರ್ಶೆ ಮಾಡಿಕೊಳ್ಳಲಿ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಸಂಬಂಧ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ನೆರೆ ಸಂಕಷ್ಟವನ್ನ ರಾಜ್ಯ ಬಿಜೆಪಿ ಎಷ್ಟರ ಮಟ್ಟಿಗೆ ನಿರ್ಲಕ್ಷಿಸಿದೆ ಎಂದರೆ ಆಡಳಿತ ಪಕ್ಷದ ಶಾಸಕರೇ ಸರಕಾರದ ವಿರುದ್ಧ ಪ್ರತಿಭಟಿಸುವಷ್ಟು. ಖಾತೆ ಕಿತ್ತಾಟ, ನಾಯಕತ್ವ ಗುದ್ದಾಟ, ಸಂಪುಟ ರಂಪಾಟಗಳು ಮಾತ್ರ ಈ ‘ಜನವಿರೋಧಿ ಬಿಜೆಪಿ’ಗೆ ಮುಖ್ಯ. ಮಲೆನಾಡಿನ ಮೂಡಿಗೆರೆಯನ್ನೇ ಅತಿವೃಷ್ಟಿ ನಿರ್ಲಕ್ಷಿಸಿದ್ದು ಸರಕಾರದ ಬೇಜವಾಬ್ದಾರಿತನಕ್ಕೆ ನಿದರ್ಶನ ಎಂದು ಕಿಡಿಗಾರಿದೆ.
ರಾಜ್ಯದ ಬಿಜೆಪಿ ಸರಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲದಿರುವಾಗ ಜನಸಾಮಾನ್ಯರಿಗೆ ‘ದೇವರೇ ಗತಿ'. ಪೆÇಲೀಸ್ ಇಲಾಖೆಯನ್ನು ಬಿಜೆಪಿಯ ಗೂಂಡಾಗಳ ಕೇಸ್ ವಾಪಸ್ ಪಡೆಯಲು, ಅತ್ಯಾಚಾರ ಆರೋಪಿಯನ್ನು ರಕ್ಷಿಸಲು ಮಾತ್ರ ಬಳಸಲಾಗುತ್ತಿದೆಯೇ ಹೊರತು ಬಲವರ್ಧನೆಗೆ ಕ್ರಮವಿಲ್ಲ ಎಂದು ಕಾಂಗ್ರೆಸ್ ಕಿಡಿಗಾರಿದೆ.
ಕೊರೋನ 3ನೇ ಅಲೆ ಹೊಸ್ತಿಲಲ್ಲಿ ನಿಂತಿದೆ, 10 ದಿನದಲ್ಲಿ 500 ಮಕ್ಕಳಿಗೆ ಸೋಂಕು ತಗುಲಿದ್ದು ಆತಂಕಕಾರಿ ಬೆಳವಣಿಗೆ. ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಿಸುವ ಯೋಜನೆಯಿಲ್ಲ, ಲಸಿಕಾಕರಣ ಕುಂಠಿತಗೊಂಡಿದೆ, ವೈದ್ಯಕೀಯ ಸಿದ್ಧತೆಯಿಲ್ಲ. ಕಿತ್ತಾಟದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರಕಾರಕ್ಕೆ ರಾಜ್ಯದ ಸಮಸ್ಯೆಗಳು ಗೌಣ ಎಂದು ಕಾಂಗ್ರೆಸ್ ಟೀಕಿಸಿದೆ.
ಸಂಸತ್ತಿನಲ್ಲಿ ಬಿಜೆಪಿ ಪಲಾಯನ: ಚರ್ಚೆ ಮಾಡಲಾಗದೆ, ಉತ್ತರ ನೀಡಲಾಗದೆ ಸಂಸತ್ತಿನ ಗೌರವಕ್ಕೆ, ಪ್ರಜಾಪ್ರಭುತ್ವದ ಆಶಯಕ್ಕೆ ಧಕ್ಕೆ ತಂದಿದೆ ಕೇಂದ್ರದ ಬಿಜೆಪಿ ಸರಕಾರ. ಪೆಗಾಸಸ್, ಕೋವಿಡ್ ವೈಫಲ್ಯ, ಬೆಲೆ ಏರಿಕೆ ಸೇರಿದಂತೆ ತಮ್ಮ ಭ್ರಷ್ಟಾಚಾರ ಹಾಗೂ ವೈಫಲ್ಯವನ್ನು ಮುಚ್ಚಿಕೊಳ್ಳಲು ಚರ್ಚೆಯಿಂದ ಪಲಾಯನ ಮಾಡಿದೆ ಬಿಜೆಪಿ.
ಆಂತರಿಕ ಕಿತ್ತಾಟ ಹಾಗೂ ನೆರೆ ಸಂತ್ರಸ್ತರ ನೆರವು ನೀಡದ ವೈಫಲ್ಯ ಮರೆಮಾಚಲು ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಯ ವಿಷಯ ತೆಗೆದರು.
— Karnataka Congress (@INCKarnataka) August 12, 2021
ಕರೋನಾ ನಿರ್ವಹಣೆಯ ವೈಫಲ್ಯ ಮರೆಮಾಚಲು @siddaramaiah @DKShivakumar ಅವರ ವೈಯುಕ್ತಿಕ ದಾಳಿಯನ್ನು ಕಂಡುಕೊಂಡಿದ್ದಾರೆ.
ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ @BJP4Karnataka, ನಿಮ್ಮ ಈ ಆಟ ನಡೆಯದು.
3/3







