ಬಂಟ ಜನಪ್ರತಿನಿಧಿಗಳಿಗೆ ಸರಕಾರದಲ್ಲಿ ಮಾನ್ಯತೆ ಸಿಗಲಿ: ಸದಾನಂದ ಶೆಟ್ಟಿ

ಮಂಗಳೂರು, ಆ.12: ಬಂಟ ಸಮುದಾಯವು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಕೀಯ, ಉದ್ಯಮ, ಶಿಕ್ಷಣ, ಕೈಗಾರಿಕೆ, ಸಿನಿಮಾ ಸಹಿತ ಹಲವು ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಿದ ದಾಖಲೆಗಳಿವೆ. ಈ ನಿಟ್ಟಿನಲ್ಲಿ ಬಂಟ ಸಮುದಾಯದ ಜನಪ್ರತಿನಿಧಿಗಳಿಗೆ ರಾಜ್ಯ ಸರಕಾರ ಮಾನ್ಯತೆ ನೀಡದಿರುವುದು ವಿಪರ್ಯಾಸ. ಮುಖ್ಯಮಂತ್ರಿ ತಕ್ಷಣ ಬಲಿಷ್ಠ ಬಂಟ ಸಮುದಾಯದ ಶಾಸಕರಿಗೆ ಸರಕಾರದಲ್ಲಿ ಮಾನ್ಯತೆ ನೀಡಬೇಕೆಂದು ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಆಗ್ರಹಿಸಿದ್ದಾರೆ.
ಕಳೆದ ಲೋಕಸಭೆ, ವಿಧಾನಸಭಾ ಚುನಾವಣೆಯಲ್ಲಿ ಬಂಟರು ಕರ್ನಾಟಕ ಸರಕಾರ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿರುತ್ತಾರೆ. ಹಾಲಾಡಿ ಶ್ರೀನಿವಾಸ್ ಶೆಟ್ಟಿ, ರಾಜೇಶ್ ನಾಯ್ಕ್ ಉಳಿಪಾಡಿ, ಡಾ.ಭರತ್ ಶೆಟ್ಟಿ, ಸುಕುಮಾರ್ ಶೆಟ್ಟಿ ಬೈಂದೂರು, ಹರೀಶ್ ಪೂಂಜ, ಇವರು ಶಾಸಕರಾಗಿ ಸಾರ್ವಜನಿಕವಾಗಿ ಗುರುತಿಸಿ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸರಕಾರ ಗಮನ ಹರಿಸಿ ಬಂಟರಿಗೂ ಮಾನ್ಯತೆ ನೀಡಬೇಕಾಗಿದೆ ಎಂದು ಸದಾನಂದ ಶೆಟ್ಟಿ ಒತ್ತಾಯಿಸಿದ್ದಾರೆ.





