ಆಯಕಟ್ಟಿನ ಘಝ್ನಿ ನಗರವನ್ನು ವಶಪಡಿಸಿಕೊಂಡ ತಾಲಿಬಾನ್

photo : PTI
ಕಾಬೂಲ್ (ಅಫ್ಘಾನಿಸ್ತಾನ), ಆ. 12: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನಿಂದ ಕೇವಲ 150 ಕಿ.ಮೀ. ದೂರದಲ್ಲಿರುವ ಆಯಕಟ್ಟಿನ ಘಝ್ನಿ ನಗರವನ್ನು ತಾಲಿಬಾನ್ ವಶಪಡಿಸಿಕೊಂಡಿದೆ ಎಂದು ಹಿರಿಯ ಸಂಸದರೊಬ್ಬರು ಗುರುವಾರ ಹೇಳಿದ್ದಾರೆ.
ಇದು ಒಂದು ವಾರದ ಅವಧಿಯಲ್ಲಿ ಭಯೋತ್ಪಾದಕರ ವಶವಾದ 10ನೇ ಪ್ರಾಂತೀಯ ರಾಜಧಾನಿಯಾಗಿದೆ. ಘಝ್ನಿ ನಗರವು ಕಾಬೂಲ್-ಕಂದಹಾರ್ ಹೆದ್ದಾರಿಯಲ್ಲಿ ಬರುತ್ತದೆ. ಹಾಗಾಗಿ ಇದು ತಾಲಿಬಾನಿಗಳಿಗೆ ದಕ್ಷಿಣದಲ್ಲಿರುವ ತಮ್ಮ ಭದ್ರ ನೆಲೆಗಳು ಮತ್ತು ರಾಜಧಾನಿ ಕಾಬೂಲ್ ನಡುವಿನ ಪ್ರಮುಖ ಹೆಬ್ಬಾಗಿಲಿನಂತಾಗಿದೆ.
‘‘ಗವರ್ನರ್ ಕಚೇರಿ, ಪೊಲೀಸ್ ಪ್ರಧಾನ ಕೇಂದ್ರ ಮತ್ತು ಜೈಲು ಸೇರಿದಂತೆ ನಗರದ ಪ್ರಮುಖ ಕಟ್ಟಡಗಳನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡಿದೆ’’ ಎಂದು ಪ್ರಾಂತೀಯ ಮಂಡಳಿಯ ಮುಖ್ಯಸ್ಥ ನಾಸಿರ್ ಅಹ್ಮದ್ ಫಕೀರಿ ಎಎಫ್ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
ನಗರದ ಕೆಲವು ಭಾಗಗಳಲ್ಲಿ ಸಂಘರ್ಷ ಮುಂದುವರಿದಿದೆ. ಆದರೆ ಪ್ರಾಂತೀಯ ರಾಜಧಾನಿಯ ಹೆಚ್ಚಿನ ಭಾಗವು ಭಯೋತ್ಪಾದಕರ ವಶದಲ್ಲಿದೆ ಎಂದು ಅವರು ಹೇಳಿದರು.
Next Story





