ಉಡುಪಿಯಲ್ಲಿ ಗ್ರಂಥಪಾಲಕರ ದಿನಾಚರಣೆ

ಉಡುಪಿ, ಆ.12: ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಗ್ರಂಥಾಲಯ ಪಿತಾಮಹ ಪದ್ಮಶ್ರೀ ಡಾ.ಎಸ್.ಆರ್.ರಂಗನಾಥನ್‌ರ 129ನೇ ಜನ್ಮದಿನದ ಅಂಗವಾಗಿ ಈ ವರ್ಷವೂ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಆಚರಿಸಲಾಯಿತು.
ಗ್ರಂಥಾಲಯ ದಿನಾಚರಣೆಯನ್ನು ಹಿರಿಯ ಸಾಹಿತಿ, ಉಡುಪಿ ತಾಲೂಕು ಕನ್ನಡ ಸಾಹಿತ್ಯ ಘಟಕದ ಅಧ್ಯಕ್ಷೆ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಕಾರದ ಉಪಾದ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ, ದೀಪ ಬೆಳಗಿಸುವ ಮೂಲಕ, ಎಸ್.ಆರ್. ರಂಗನಾಥರ ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ಬೆಂಗಳೂರು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶಕುಮಾರ ಎಸ್. ಹೊಸಮನಿ ಮಾತನಾಡಿ, ಕರ್ನಾಟಕ ಡಿಜಿಟಲ್ ಸಾರ್ವಜನಿಕ ಗ್ರಂಥಾಲಯ (ಇ-ಸಾರ್ವಜನಿಕ ಗ್ರಂಥಾಲಯ) ಪೋರ್ಟಲ್ ನಲ್ಲಿ ಇದುವರೆಗೆ 99 ಲಕ್ಷಕ್ಕೂ ಅಕ ಮಂದಿ ಸದಸ್ಯರಾಗಿ ನೋಂದಾಯಿ ಸಿಕೊಂಡಿದ್ದಾರೆ. ಸಾರ್ವಜನಿಕರು ಈ ಪೋರ್ಟಲ್ ಬಳಸಿ ಪುಸ್ತಕ, ದಿನಪತ್ರಿಕೆ, ನಿಯತಕಾಲಿಕೆ, ಜರ್ನಲ್‌ಗಳನ್ನು ಓದುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಸಾರ್ವಜನಿಕರು ಅದರ ಉಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ, ಮೊಬೈಲ್ ಆ್ಯಪ್ ಮೂಲಕ ಕೂಡಾ ಈ ಪೋರ್ಟಲ್‌ನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು.
ವಸಂತಿ ಶೆಟ್ಟಿ ಬ್ರಹ್ಮಾವರ, ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್‌ರ ಕುರಿತು ಉಪನ್ಯಾಸ ನೀಡಿದರು. ಬೈಂದೂರು ತಾಲೂಕು ಕಂಬದಕೋಣೆ ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಬ್ರಹ್ಮಣ್ಯ ಭಟ್, ಕೊರೋನದ ಜೊತೆಗೆ ನಮ್ಮ ಬದುಕು ಹೇಗೆ ಮತ್ತು ಏಕೆ.? ಬಗ್ಗೆ ಉಪನ್ಯಾಸ ನೀಡಿದರು. ಡಿಜಿಟಲ್ ಗ್ರಂಥಾಲಯ : ಬಳಕೆ, ಮಹತ್ವ ಮತ್ತು ಉಪಯೋಗಗಳ ಕುರಿತು ಗೋಪಾಲ ರೆಡ್ಡಿ ಮಾತನಾಡಿದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಕಾರಿ ನಳಿನಿ ಜಿ.ಐ. ಗೂಗಲ್ ಮೀಟ್ ಮೂಲಕ ಸಂಪರ್ಕದಲ್ಲಿದ್ದ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಕುಂದಾಪುರ ಶಾಖಾ ಗ್ರಂಥಾಲಯದ ಸಹ ಗ್ರಂಥಪಾಲಕ ಜಗದೀಶ್ ಭಟ್ ವಂದಿಸಿದರು.







