ಅಡ್ಡೂರು: ಸಹರಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಮೂವರು ಟಾಪರ್ಸ್

ಮಂಗಳೂರು, ಆ.12: ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಈಗಾಗಲೇ ಪ್ರಕಟಗೊಂಡಿದ್ದು, ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಮೂವರು ವಿದ್ಯಾರ್ಥಿಗಳು ಅತ್ಯಧಿಕ ಅಂಕ ಪಡೆದು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ.
ರಾಮ್‌ನಂದನ್ ಮಯ್ಯ (593 ಎ+), ಧನ್ಯಶ್ರೀ (588 ಎ+), ತಸ್ಬಿಯಾ (585 ಎ+) ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳು. ಅಲ್ಲದೆ, ಇದೇ ಪ್ರೌಢಶಾಲೆಯ 11 ವಿದ್ಯಾರ್ಥಿಗಳು ‘ಎ ಗ್ರೇಡ್’, 56 ವಿದ್ಯಾರ್ಥಿಗಳು ‘ಬಿ ಗ್ರೇಡ್’ ಪಡೆದಿದ್ದಾರೆ.
ವಿದ್ಯಾರ್ಥಿಗಳಾದ ಸಹಝ್ಮಿ (554), ಫರ್ಝಾನ ಫಾತಿಮಾ (550), ಫಾತಿಮತ್ ರಿಝಾ (547), ಆಸಿಯಾ ಅಫ್ರ (543), ಶಹ್ಲ ಮುನೀಶಾ (542), ಫಾತಿಮಾ ಝಹರಿಯಾ (538), ತಝೀನ್ (535), ಫವಾಝ್ ಲೈಸುಲ್ಲಾ (521), ಫಾತಿಮಾ ಸುಹಾನಾ (517), ಜೆನ್ನಿಫರ್ ಡಿಸೋಜ (508), ಫಾತಿಮಾ ಮುರ್ಷಿದಾ (501) ಅವರು ‘ಎ-ಗ್ರೇಡ್’ ಪಡೆದು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
Next Story





