ಯಾದಗಿರಿ: 6 ಬುದ್ಧಿಮಾಂಧ್ಯ ಮಕ್ಕಳೊಂದಿಗೆ ವಾಸವಾಗಿದ್ದ ಶರೀಫಮ್ಮ ಜೋಪಡಿಗೆ ಭೇಟಿ ನೀಡಿದ ತಹಶೀಲ್ದಾರ್
ವಾರ್ತಾಭಾರತಿ ವರದಿ ಫಲಶ್ರುತಿ

ಯಾದಗಿರಿ: ಇತ್ತೀಚೆಗೆ ಜಿಲ್ಲೆಯ ಬೆನಕಲಿ ಗ್ರಾಮದಲ್ಲಿ ಜೋಪಡಿಯೊಂದರಲ್ಲಿ 6 ಬುದ್ಧಿಮಾಂಧ್ಯ ಮಕ್ಕಳೊಂದಿಗೆ ವಾಸವಾಗಿದ್ದ ಶರೀಫಮ್ಮ ಎಂಬವರ ದಯನೀಯ ಸ್ಥಿತಿ ಬಗ್ಗೆ 'ವಾರ್ತಾ ಭಾರತಿ' ವೀಡಿಯೊ ವರದಿ ಮಾಡಿದ್ದು, ಇದೀಗ ತಹಶೀಲ್ದಾರ್ ಭೇಟಿ ನೀಡಿ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.
ಕಳೆದ ಪ್ರವಾಹ ಸಂದರ್ಭದಲ್ಲಿ ಹಾವು, ಚೇಳು ಸೇರಿದಂತೆ ವಿಷ ಜಂತುಗಳು ಜೋಪಡಿಯೊಳಗೆ ಸೇರುತ್ತಿದ್ದವು. ಚುನಾವಣೆಯ ಸಂದರ್ಭಗಳಲ್ಲಿ ಕೆಲವು ರಾಜಕಾರಣಿಗಳು ಶರೀಫಮ್ಮ ಅವರ ಮನೆಗೆ ಭೇಟಿ ನೀಡಿದ್ದರು ಕೇವಲ ಆಶ್ವಾಸನೆಗಳನ್ನು ಕೊಡುತ್ತಿದ್ದರಷ್ಟೇ ಹೊರತು ಈ ವರೆಗೂ ಯಾವುದೇ ಅಧಿಕಾರಿಗಳು ಇವರ ಸಮಸ್ಯೆಗೆ ಸ್ಪಂದಿಸಿಲ್ಲ. ಈ ಬಗ್ಗೆ 'ವಾರ್ತಾ ಭಾರತಿ'ಯು 'ಮಳೆ ಬಂದರೆ ಹಾವು, ಚೇಳುಗಳೊಂದಿಗೆ ವಾಸ: ಕುಸಿದು ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ 6 ಬುದ್ಧಿಮಾಂದ್ಯ ಮಕ್ಕಳು' ಎಂಬ ಶೀರ್ಷಿಕೆಯಡಿಯಲ್ಲಿ ವರದಿ ಮಾಡಿತ್ತು. ಇದೀಗ ತಹಶೀಲ್ದಾರ್, ಅವರು ಮನೆ ನಿರ್ಮಿಸುವ ಭರವಸೆ ನೀಡಿದ್ದಾರೆ. ಇನ್ನು ಅಂಗವಿಕಲರ ಇಲಾಖೆ ಮನೆಯಲ್ಲಿರುವ ಬುದ್ದಿಮಾಂದ್ಯ ಮಕ್ಕಳಿಗೆ ವೀಲ್ ಚೇರ್ ವಿತರಿಸಿದೆ. ಸ್ಥಳೀಯಾಡಳಿತದಿಂದ ಪಡಿತರ, ಅಗತ್ಯ ಸಾಮಗ್ರಿಗಳ ವಿತರಣೆಯನ್ನು ಮಾಡಿದೆ.





