ಶಿರೂರು: ತೌಹೀದ್ ಪಬ್ಲಿಕ್ ಸ್ಕೂಲ್ 100 ಶೇ. ಫಲಿತಾಂಶ

ಬೈಂದೂರು, ಆ.12: ಶಿರೂರು ತೌಹೀದ್ ಪಬ್ಲಿಕ್ ಸ್ಕೂಲ್ 100 ಶೇ. ಫಲಿತಾಂಶ ದಾಖಲಿಸಿದ್ದು, ಪರೀಕ್ಷೆ ಬರೆದ 35 ವಿದ್ಯಾರ್ಥಿಗಳ ಪೈಕಿ 3 ಮಂದಿ ವಿಶಿಷ್ಟ ಶ್ರೇಣಿ, 19 ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಚೌ ನೆಹ್ರೀನ್ 92.80 ಶೇ., ಆಯಿಶ ನೌರೀನ್ 88.80 ಶೇ. ಹಾಗೂ ಝೈಗದ್ಕರ್ ಫಿಝಾ ಅಂಬರ್ 88.80 ಶೇ. ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





