ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಅಧಿಕಾರಾವಧಿ 1 ವರ್ಷ ವಿಸ್ತರಣೆ
ಹೊಸದಿಲ್ಲಿ, ಆ. 12: ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರ ಅಧಿಕಾರಾವಧಿಯನ್ನು ಗುರುವಾರ ಒಂದು ವರ್ಷಗಳ ಕಾಲ ವಿಸ್ತರಿಸಲಾಗಿದೆ. ಅವರ ಪ್ರಸಕ್ತ ಅಧಿಕಾರಾವಧಿ ಮುಂದಿನ ವಾರ ಅಂತ್ಯಗೊಳ್ಳಲಿದೆ ಎಂದು ಗೃಹ ಸಚಿವಾಲಯದ ಅಧಿಕೃತ ಆದೇಶ ತಿಳಿಸಿದೆ. ಭಲ್ಲಾ ಅವರು ಅಸ್ಸಾಂ-ಮೇಘಾಲಯ ಕೇಡರ್ ನ 1984ರ ಬ್ಯಾಚ್ ನ ಐಎಎಸ್ ಅಧಿಕಾರಿ. ಅವರನ್ನು 2019ರಲ್ಲಿ ಗೃಹ ಕಾರ್ಯದರ್ಶಿಯನ್ನಾಗಿ ನಿಯೋಜಿಸಲಾಗಿತ್ತು.
‘‘ಗೃಹ ವ್ಯವಹಾರಗಳ ಸಚಿವಾಲಯದ ಗೃಹ ಕಾರ್ಯದರ್ಶಿಯಾಗಿ ಭಲ್ಲಾ ಅವರ ಅಧಿಕಾರಾವಧಿಯನ್ನು ಒಂದು ವರ್ಷಗಳ ಕಾಲ ವಿಸ್ತರಿಸಲು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ. ಅವರ ಅಧಿಕಾರಾವಧಿ ಆಗಸ್ಟ್ 22ರಂದು ಅಂತ್ಯಗೊಳ್ಳಲಿದೆ’’ ಎಂದು ಆದೇಶ ತಿಳಿಸಿದೆ. ಭಲ್ಲಾ ಅವರ ಅಧಿಕಾರಾವಧಿಯನ್ನು ಕಳೆದ ವರ್ಷ ಅಕ್ಟೋಬರ್ 22ರಂದು 1 ವರ್ಷಗಳ ಕಾಲ ವಿಸ್ತರಿಸಲಾಗುತ್ತು. ಅವರು 2020 ನವೆಂಬರ್ನಲ್ಲಿ ನಿವೃತ್ತಿಯಾಗಿದ್ದರು.
Next Story





