ಶಾಲಾರಂಭದ ಬಗ್ಗೆ ತಜ್ಞರ ತುರ್ತು ಸಭೆ ಕರೆದು ನಿರ್ಧಾರ: ಸಿಎಂ ಬೊಮ್ಮಾಯಿ

ಉಡುಪಿ, ಆ.13: ಶಾಲಾರಂಭದ ಕುರಿತಂತೆ ಇಂದು ತಜ್ಞರ ತುರ್ತು ಸಭೆ ಕರೆದು ನಿರ್ಧರಿಸಲಾಗವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದಲ್ಲಿಂದು ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ಸುದ್ದಿಗಾರ ಜೊತೆ ಅವರು ಮಾತನಾಡುತ್ತಿದ್ದರು.
ಶಾಲಾರಂಭಕ್ಕೆ ಸರಕಾರ ನಿರ್ಧರಿಸುವ ನಡುವೆಯೇ ರಾಜ್ಯದಲ್ಲಿ ಮಕ್ಕಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಮಾಧ್ಯಮದವರು ಗಮನಸೆಳೆದಾಗ ಪ್ರತಿಕ್ರಿಯಿಸಿದ ಸಿಎಂ, ತಜ್ಞರ ವರದಿಯನ್ನು ಆಧರಿಸಿಯೇ ಶಾಲಾ-ಕಾಲೇಜು ಆರಂಭಿಸಲು ನಿರ್ಣಯ ಕೈಗೊಳ್ಳಲಾಗಿದೆ. ಇಂದು ಮತ್ತೊಮ್ಮೆ ತಜ್ಞರ ತುರ್ತು ಸಭೆ ಕರೆದು ಅವರ ಅಭಿಪ್ರಾಯಗಳನ್ನು ಪಡೆದು ಶಾಲಾರಂಭದ ಬಗ್ಗೆ ತೀರ್ಮಾನ ಕೈಕೊಳ್ಳಲಾಗುವುದು ಎಂದರು.
Next Story





